ನೆರಡಗಂಬ ಸಿದ್ದಲಿಂಗೇಶ್ವರ ಸಂಸ್ಥಾನ ವಿರಕ್ತ ಮಠದ ಜಾತ್ರೆ ಪೂರ್ವಭಾವಿ ಸಭೆ

Chandrashekhara Kulamarva
0


ಬಾಗಲಕೋಟೆ: ತೆಲಂಗಾಣ ರಾಜ್ಯದ ನೆರಡಗಂಬ ಗ್ರಾಮದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದಲ್ಲಿ 2025 ಮಾರ್ಚ್ 16 ,17 ಮತ್ತು 18 ಜರಗುವ ಜಾತ್ರಾ ಮಹೋತ್ಸವ ಹಾಗೂ ಮೂರನೇ ಸಿದ್ದಲಿಂಗೇಶ್ವರರ 60ನೇ ಪುಣ್ಯಾರಾಧನೆಯ ಸಮಾರಂಭದ ಪೂರ್ವಭಾವಿ ಸಮಾವೇಶ ಶ್ರೀ ಮಠದಲ್ಲಿ ಪೀಠಾಧಿಪತಿ ಪಂಚಮ ಸಿದ್ದಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.


ಸಭೆ ಉದ್ದೇಶಿಸಿ ಶ್ರೀ ಮಠದ ಪಂಚಮ ಸಿದ್ದಲಿಂಗ ಶ್ರೀಗಳು ಮಾತನಾಡಿ ಶ್ರೀಮಠದಲ್ಲಿ ಮಾರ್ಚ್ 16, 17, 18 ದಿನಾಂಕಗಳಲ್ಲಿ ಉಚಿತ ಸಾಮೂಹಿಕ ವಿವಾಹಗಳು 1111 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಗೋಶಾಲೆ ಉದ್ಘಾಟನೆ ಹಾಗೂ ಗೋಪೂಜೆ ಅನಾಥಾಶ್ರಮ ಉದ್ಘಾಟನೆ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಗಾಳಿಗೋಪುರ ಉದ್ಘಾಟನೆಗಳು ಸೇರಿದಂತೆ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ವಿವರಿಸಿದರು.


ನಂತರ ಮಕ್ತಲ ಕ್ಷೇತ್ರದ ಶಾಸಕ ಡಾ. ವಾಕಟಿ ಶ್ರೀಹರಿ ಅವರು ಮಾತನಾಡಿ, ಸ್ವಾಮೀಜಿಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಾವೆಲ್ಲರೂ ಕೂಡಿಕೊಂಡು ಯಶಸ್ವಿಗೊಳಿಸೋಣ. 


ನಮ್ಮ ಭಾಗದಲ್ಲಿ ನೇರಡಗಂಬ ಶ್ರೀಮಠ ಆಧ್ಯಾತ್ಮಿಕ ಕ್ಷೇತ್ರವಾಗಿದೆ. ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್ತು ಸೇರಿದಂತೆ ಎಲ್ಲ ಸಕಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳಲ್ಲಿ ಮಾತಾಡಿ ಸರಿಯಾದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಈ ಪುಣ್ಯ ಭೂಮಿಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ಅದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕರು ಹೇಳಿದರು.


ಕಾರ್ಯಕ್ರಮದಲ್ಲಿ ನೇರಡಗಂ ಗ್ರಾಮದ ಎಲ್ಲ ಸಮಸ್ತ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಸದ್ಭಕ್ತರು ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


إرسال تعليق

0 تعليقات
إرسال تعليق (0)
To Top