ವಿದ್ಯೆಗೆ ವಿನಯವೇ ಭೂಷಣ: ಅಭಿನವ ಸಿದ್ದಲಿಂಗ ಶ್ರೀಗಳು

Upayuktha
0




ಬಾಗಲಕೋಟೆ: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ನಯವಿನಯ, ಸಂಸ್ಕಾರಗಳನ್ನು ಕಲಿತುಕೊಂಡರೆ ಅದುವೇ ಭೂಷಣವಾಗುತ್ತದೆ ಎಂದು ಶಿವಯೋಗ ಆಶ್ರಮದ ಪರಮಪೂಜ್ಯ ಅಭಿನವ ಸಿದ್ಧಲಿಂಗ ಸ್ವಾಮೀಜಿಗಳು ಹೇಳಿದರು.


ಅವರು ರಾಷ್ಟ್ರಮಟ್ಟದ 31ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಜಿಲ್ಲೆಯ ಶಿರೂರು ಪಟ್ಟಣದ ಬಾಲ ವಿಜ್ಞಾನಿ ಸಿದ್ದೇಶ್ವರ ಪ್ರೌಢಶಾಲೆ ಯ ಕುಮಾರಿ ಸಹನ ಕೊಣ್ಣೂರ್ ಹಾಗೂ ಮಾರ್ಗದರ್ಶಿ ಶಿಕ್ಷಕ ಸಂಜಯ್ ನಡುವಿನಮನಿ ಅವರಿಗೆ ಲಿಂ. ಶಾಂತಾ ಬ ಮಾಚಾ  ಹಾಗೂ ಲಿಂ ಸಂಗಪ್ಪ ಮಾಚಾ ಪರಿವಾರದವರು ಹಮ್ಮಿಕೊಂಡ ಅಭಿನಂದನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ವಿಜ್ಞಾನದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಾದವರು ತಮ್ಮನ್ನು ತಾವು ತೊಡಗಿಸಿಕೊಂಡು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಲು ಈಗಿನಿಂದಲೇ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದರು.


ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಎಸ್‌ ಜಿ ಎಮ್ಮಿ ಮಾತನಾಡಿ, ಪ್ರತಿಭೆ ಸದಾ ಕಾಲ ಕಂಗೊಳಿಸಬೇಕಾದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಹಲವಾರು ವಿಚಾರಗಳನ್ನು ಅರಿತುಕೊಂಡು ಅವುಗಳಿಗೆ ಸೂಕ್ತವಾದ ಪರಿಹಾರವನ್ನು ಕಂಡು ಹಿಡಿಯಬೇಕೆಂದರು. ಅದುವೇ ವಿಜ್ಞಾನದ ನಿಜವಾದ ತಿರುಳು ಎಂದರು.


ಇದೇ ಸಂದರ್ಭದಲ್ಲಿ ಕುಮಾರಿ ಸಹನಾ ಅವರನ್ನು ಮತ್ತು ಮಾರ್ಗದರ್ಶನ ಮಾಡಿದ ವಿಜ್ಞಾನ ಶಿಕ್ಷಕ ಸಂಜಯ್ ನಡುವಿನಮನಿ ಅವರನ್ನುಕುಟುಂಬದ ಪರವಾಗಿ ಪೂಜ್ಯಶ್ರೀಗಳು ಹಾಗೂ ಗುರು ಹಿರಿಯರು ಸತ್ಕರಿಸಿ ಆಶೀರ್ವದಿಸಿದರು. 


ವೇದಿಕೆ ಮೇಲೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದಪ್ಪ ಕೋಟಿಕಲ್ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶೇಖರ್ ಗೌಡ ಮಾಚಾ, ಮುಖಂಡರಾದ ಅರ್ಜುನ್ ಅಂಗಡಿ ಶ್ರೀರಂಗಪ್ಪ ಮಳ್ಳಿ, ರಾಮನಗೌಡ ಮಾಚಾ, ಶ್ರೀ ಸಿದ್ದೇಶ್ವರ ಪ್ರೌಢಶಾಲೆ ಮುಖ್ಯ ಗುರು ಮಾತೆ  ಎಲ್‌ ಟಿ ಪೂಜಾರ್ ಉಪಸ್ಥಿತರಿದ್ದರು.


ಅತ್ಯಂತ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪಟ್ಟಣದ ಗುರುಹಿರಿಯರು, ತಾಯಂದಿರು, ಪ್ರೌಢಶಾಲೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಶಿಕ್ಷಕ ಬಸನಗೌಡ ಮಾಚಾ ಸ್ವಾಗತಿಸಿದರು. ಗುರುರಾಜ ಶಿರೂರು ಕಾರ್ಯಕ್ರಮ ನಿರೂಪಿಸಿದರು. ವಿಶ್ರಾಂತ ದೈಹಿಕ ಶಿಕ್ಷಕ ಎಸ್ ಬಿ ಮಾಚಾ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top