ವಿಸಿಯಲ್ಲಿ ಎನ್‍ಎಸ್‍ಎಸ್ ಪುತ್ತೂರು ವಲಯ ಮಟ್ಟದ ಚಟುವಟಿಕೆಗಳ ಉದ್ಘಾಟನೆ

Upayuktha
0

 


ಪುತ್ತೂರು: ವಿದ್ಯಾರ್ಥಿಗಳ ಜೀವನದಲ್ಲಿ ರಾಷ್ಟೀಯ ಸೇವಾ ಯೋಜನೆಯು ಒಂದೊಳ್ಳೆ ಪಾತ್ರವನ್ನುವಹಿಸುತ್ತದೆ. ಶಿಕ್ಷಣದೊಂದಿಗೆ ಸಮಾಜ ಸೇವೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಕೆಲಸವನ್ನು ರಾಷ್ಟೀಯ ಸೇವಾ ಯೋಜನೆಯು ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿರುವ ಕಲೆಗಳನ್ನು ಹೊರತರುವಲ್ಲಿ ಮತ್ತು ಅದನ್ನು ಬೆಳೆಸುವಲ್ಲಿ ಎನ್‍ಎಸ್‍ಎಸ್ ಬಹಳ ದೊಡ್ಡ ಪಾತ್ರ ವಹಿಸಿದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆದರೆ ಮಾತ್ರ ರಾಷ್ಟೀಯ ಸೇವಾ ಯೋಜನೆಯ ಬೆಳವಣಿಗೆ ಸಾಧ್ಯ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ.ಶೇಷಪ್ಪ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ(ಸ್ವಾಯತ್ತ) ಮಹಾವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯ ರಾಷ್ಟೀಯ ಸೇವಾ ಯೋಜನೆ ಪುತ್ತೂರು ವಲಯ  ಜಂಟಿಯಾಗಿ ಆಯೋಜಿಸಿದ ಪುತ್ತೂರು ವಲಯ ಮಟ್ಟದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಎಸ್‍ವಿಎಸ್ ಕಾಲೇಜು ಬಂಟ್ವಾಳ ನಿವೃತ್ತ ರಾಜ್ಯ ಶಾಸ್ತ್ರ ಉಪನ್ಯಾಸಕ ಪ್ರೊ. ನಾರಾಯಣ ಭಂಡಾರಿ   ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿ, ಮಾತನಾಡಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳಲ್ಲಿ  ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಸಹಾಯಮಾಡುತ್ತದೆ  ಹಾಗೂ ನಾವು ಮಾಡುವಂತಹ ಕೆಲಸಗಳು ಎಂದಿಗೂ ಸಮಾಜಕ್ಕೆ ಮಾದರಿ ಆಗಬೇಕು ಎಂದು ನುಡಿದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ,ಕಾಲೇಜಿನ ಸಂಚಾಲಕ  ಮುರಳಿಕೃಷ್ಣ. ಕೆ.ಎನ್ ಮಾತನಾಡಿ, ನಾವು ಯಾವುದೇ ಕಾರಣಕ್ಕೂ ಪ್ರತಿಫಲ ಅಪೇಕ್ಷಿಸದೆ, ಸ್ವಯಂ ಪ್ರೇರಕವಾಗಿ ಸಮಾಜಕ್ಕೋಸ್ಕರ ಕೆಲಸವನ್ನು ಮಾಡುವವರಾಗಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಪುತ್ತೂರು ವಲಯ  ಸಂಘಟನಾಧಿಕಾರಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ, ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಹರಿಪ್ರಸಾದ್. ಎನ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸೈಬರ್ ಕ್ರೈಮ್ ಮತ್ತು ಸೈಬರ್ ಸೆಕ್ಯುರಿಟಿ ವಿಷಯದ ಕುರಿತು ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ   ಉಪನ್ಯಾಸಕಿ ಹೇಮಾ ಶುಭಾಷಿಣಿ ನಡೆಸಿಕೊಟ್ಟರು.


ಕಾರ್ಯಕ್ರಮವನ್ನು ಕಾಲೇಜಿನ ಎನ್‍ಎಸ್‍ಎಸ್ ಯೋಜನಾಧಿಕಾರಿ ಡಾ. ಅರುಣಪ್ರಕಾಶ್ ಸ್ವಾಗತಿಸಿ, ವಿದ್ಯಾ ಕೆ.ನ್ ವಂದಿಸಿ, ಸ್ವಯಂ ಸೇವಕಿ ಪ್ರಣಮ್ಯ.ಯು ನಿರ್ವಹಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top