ಮಾತೆಂಬುದು ನಮ್ಮ ಜೀವನದ ಇರುವಿಕೆಯನ್ನು ತೋರಿಸುತ್ತದೆ. ಮಾತು ನಮ್ಮ ಸಂಸ್ಕಾರ ವನ್ನು ಎತ್ತಿ ತೋರಿಸುತ್ತದೆ. ಅದಕ್ಕೆ "ನಾಲಿಗೆ ಕುಲವನರುಹಿತು" ಎನ್ನುತ್ತಾರೆ. ಮಾತು ಒಮ್ಮೊಮ್ಮೆ ಸಮಾಜದಲ್ಲಿ ತನ್ನದೇ ಆದ ಪರಿಣಾಮ ಬೀರುತ್ತದೆ. ರಾಜಸೂಯ ಯಾಗದ ನಂತರ ದುರ್ಮೋಧನ ಪಾಂಡವರ ಅರಮನೆ ನೋಡಲು ಬಂದಾಗ ಕೊಳವನ್ನು ನೆಲವೆಂದು ಭ್ರಮಿಸಿಕೊಂಡು ಬಿದ್ದು ಬಟ್ಟೆಗಳೆಲ್ಲ ತೊಯ್ದಾಗ ದ್ರೌಪದಿ "ಕುರುಡನ ಮಗ ಕುರುಡ" ಎಂದು ಗೇಲಿ ಮಾಡಿದ ಮಾತು ಮುಂದೆ ದ್ರೌಪದಿಯ ವಸ್ತ್ರಾಪಹರಣಕ್ಕೆ ದಾರಿಯಾಯಿತು.
ಆಗಸ ತವರು ಮನೆಗೆ ಹೋಗಿ ಬಂದ ಹೆಂಡತಿಗೆ ಬೇಕಾದಾಗ ಮನೆಗೆ ಸೇರಿಸಿಕೊಳ್ಳಲಿಕ್ಕೆ ನಾನೇನು ಶ್ರೀರಾಮಚಂದ್ರನಾ ಅಂದ ಮಾತು ಸೀತಾದೇವಿಯ ಜೀವನವನ್ನೇ ಅಲ್ಲಾಡಿಸಿಬಿಟ್ಟಿತು. ಪುರಂದರ ದಾಸರು ತಮ್ಮ ಕೀರ್ತನೆಯಲ್ಲಿ ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ತಿಳಿ ಹೇಳಿದ್ದಾರೆ.
ಇಂಗ್ಲಿಷಿನಲ್ಲಿ ಹೇಳುತ್ತಾರೆ "We should carefull about our words" ಒಮ್ಮೆ ಬಿಟ್ಟ ಬಾಣ, ಆಡಿದ ಮಾತು ಹಿಂತೆಗೆದು ಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮಾತುಗಳ ಬಗ್ಗೆ ಎಚ್ಚರಿಕೆ ಇರಬೇಕು.
ಆದರೆ ಮಾತನ್ನೇ ಬಂಡವಾಳ ಮಾಡಿಕೊಂಡು ಸಾಧನೆ ಮಾಡಿದ, ಗಂಗಾವತಿ ಪ್ರಾಣೇಶ, ಸುಧಾ ಬರಗೂರು, ಮುಂತಾದ ವಾಗ್ಮಿಗಳು ಪ್ರಸಿದ್ಧ ಆಗಿದ್ದಾರೆ. ನಾವು ಇತ್ತ ಕಡೆಗೆ ಗಮನ ಹರಿಸೋಣ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ