ಬಳ್ಳಾರಿ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಹಾಗೂ ಭಾರತೀಯ ವೈದಕೀಯ ಸಂಘ ಬಳ್ಳಾರಿ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಅಂಗವಾಗಿ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಬಳ್ಳಾರಿ ಮತ್ತು ಸರಕಾರಿ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಡಾ.ದಿವ್ಯಾ ಅವರು ಸಾಹಸದ ಕಥೆಯನ್ನು ಹೇಳುತ್ತ ಮಕ್ಕಳಲ್ಲಿ ಈ ದಿನದ ಉದ್ದೇಶವನ್ನು ತಿಳಿಸಿದರು. ಹಾಗೆಯೆ ಡಾ. ಅರುಣಾ ಅವರು ಮಕ್ಕಳಲ್ಲಿ ಜೀವನದ ಗುರಿಯನ್ನು ಹುಡುಕುವುದು ಹಾಗೂ ಅದರ ನಿಟ್ಟಿನಲ್ಲಿ ಚಲಿಸುವುದು ಎಷ್ಟು ಅತ್ಯಗತ್ಯ ಎನ್ನುವುದನ್ನು ಮನವರಿಕೆ ಮಾಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಎಸ್. ವಿಜಯಲಕ್ಷ್ಮೀ ಶಾಖಾ ವ್ಯವಸ್ಥಾಪಕರು ಅವರು ಮಾತನಾಡುತ್ತಾ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಬರುವ ಅವಕಾಶ ಹಾಗೂ ಸಾಧನೆಯನ್ನು ಉಪಯೋಗಿಸಿಕೊಂಡಲ್ಲಿ ತಮ್ಮ ಜೀವನದ ಉದ್ದೇಶವನ್ನು ಮುಟ್ಟಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಡಾ. ಸಂಗೀತಾ ಐಎಂಎ ಕಾರ್ಯದರ್ಶಿ ಮಾತನಾಡುತ್ತಾ ಹೆಣ್ಣು ಮಗುವಿನ ಬೆಳವಣಿಗೆ ಗರ್ಭದಿಂದ ಗೋರಿಯವರೆಗೆ ಸಹಾಸಕರ ಪ್ರತಿ ಹೆಜ್ಜೆಯಲ್ಲಿಯೂ ಹಲವಾರು ತೊಂದರೆಗಳನ್ನು ಎದುರಿಸುತ್ತಾ ಬೆಳೆಯುತ್ತಾರೆ ಹಾಗಾಗಿಯೇ ಬೇಟಿ ಪಚವೋ ಬೇಟಿ ಪಡಾವೋ ಯೋಜನೆಯ ಮಹತ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಜೊತೆಗೆ 500 ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ