ಮಂಗಳೂರು: ಯತಿಶ್ರೇಷ್ಠ ಪದ್ಮವಿಭೂಷಣ ಬೃಂದಾವನಸ್ಥ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರ ಐದನೇ ವರ್ಷದ ಸಂಸ್ಮರಣೆಯ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಸಂಸ್ಮರಣಾ ಕಾರ್ಯಕ್ರಮವನ್ನು ಜ.5ರಂದು ಭಾನುವಾರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು ಇದರ ಸಭಾಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಶ್ರೀಪಾದರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಕೇಳಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಸಂಸ್ಮರಣಾ ಬಳಗ ಮತ್ತು ಕೃಷ್ಣಾರ್ಪಣಮ್ ಟ್ರಸ್ಟ್ (ರಿ) ಇದರ ನೇತೃತ್ವದಲ್ಲಿ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ತುಳು ಶಿವಳ್ಳಿ ಬ್ರಾಹ್ಮಣ ಸಂಘ ದ.ಕ., ಹವ್ಯಕ ಮಹಾಮಂಡಲ ಮಂಗಳೂರು, ಕೂಟ ಮಹಾಜಗತ್ತು ಮಂಗಳೂರು, ಸುಬ್ರಹ್ಮಣ್ಯ ಸಭಾ ಮಂಗಳೂರು, ಕರ್ಹಾಡ ಬ್ರಾಹ್ಮಣ ಸಮಾಜ (ರಿ), SKDB ಅಸೋಸಿಯೇಷನ್ ಕೊಡಿಯಾಲ್ ಬೈಲ್, ವಿಪ್ರವೇದಿಕೆ (ರಿ) ಕೋಡಿಕಲ್, ವಿಪ್ರ ಸಮಾಗಮ ವೇದಿಕೆ ಮಂಗಳೂರು, ಚಿತ್ಪಾವನ ಬ್ರಾಹ್ಮಣ ಸಂಘ ಮತ್ತು ವಿಪ್ರ ಸಮೂಹ ಕೊಂಚಾಡಿ ಇದರ ಸಹಭಾಗಿತ್ವದಲ್ಲಿ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ