ಪುಟ್ಟ ಗುಡಿಸಲಿನಿಂದ ವಿದೇಶ ತಲುಪಿದ 'ಗೋಕಾಕ ಕರದಂಟು'

Upayuktha
0


'ಗೋಕಾಕ ಕರದಂಟು ಸ್ವಾದ' ಸಣ್ಣದೊಂದು ಗುಡಿಸಲಿನಲ್ಲಿ ಕಡಾಯಿ ಇಟ್ಟುಕೊಂಡು ಮಾಡುತ್ತಿದ್ದ ಗೋಕಾಕ್ ಕರದಂಟು ಭಾರತ ಅಷ್ಟೇ ಅಲ್ಲ ಅಮೆರಿಕ, ಖತಾರ್ ಸೇರಿ ದೇಶ ವಿದೇಶಗಳಿಗೆ ರಫ್ತಾಗುವ ಮೂಲಕ ಎಲ್ಲರ ಮನೆ ಮಾತಾಗಿದೆ. ಗೋಕಾಕ ಅಂದಾಕ್ಷಣ ನೆನಪಾಗುವುದೇ ಗೋಕಾಕ ಫಾಲ್ಸ್ ಹಾಗೂ ಕರದಂಟು. ಗರ್ಭಿಣಿಯರು, ಬಾಣಂತಿಯರು, ಋತುಮತಿಯರು, ಮಕ್ಕಳು, ಕ್ರೀಡಾ ಪಟುಗಳಿಗೆ ಪೌಷ್ಟಿಕ ಆಹಾರವಾಗಿದೆ. ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಕೊಬ್ಬರಿ ತುರಿ, ಗಸಗಸೆ, ಅಂಟು, ಬೆಲ್ಲ ಹಾಗೂ ತುಪ್ಪಗಳಿಂದ ತಯಾರಿಸಲಾಗುತ್ತದೆ.


ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಶಂಕರ್ ದೇವರಮನಿ ಮಾಲೀಕತ್ವದ ಸದಾನಂದ ಸ್ವೀಟ್ ಅಂಗಡಿಯಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಹೈದರಾಬಾದ್, ತಮಿಳುನಾಡು, ಕೇರಳ ಸೇರಿ ಇಡೀ ದೇಶಾದ್ಯಂತ ಮಾರಾಟ ಆಗುತ್ತದೆ. ದಿನಕ್ಕೆ ಮೂರರಿಂದ ನಾಲ್ಕು ಟನ್ ಕರದಂಟು ಸಿದ್ದಪಡಿಸುತ್ತಾರೆ. ಆನ್‌ಲೈನ್ ಮೂಲಕ ಮನೆ ಬಾಗಿಲಿಗೆ ಸರಬರಾಜು ಮಾಡುತ್ತಾರೆ.


ಉತ್ತರ ಕರ್ನಾಟಕದ ಆರೋಗ್ಯಕರ ಮತ್ತು ರುಚಿಕರವಾದ ಸಿಹಿ ಕರದಂಟು ಹೆಚ್ಚಿನ ಪ್ರೋಟೀನ್ ಕಬ್ಬಿಣಾಂಶ ಹೇರಳವಾಗಿರುವದರಿಂದ ಆಯಾಸ ಮತ್ತು ರಕ್ತಹೀನತೆಯನ್ನು ತಡೆಯುತ್ತದೆ. ಕ್ಯಾಲ್ಸಿಯಂ ಸಮೃದ್ದವಾಗಿದೆ. ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.


ಕರ್ನಾಟಕ ರಾಜ್ಯದಲ್ಲಿ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದೆ. ನೂರು ವರ್ಷಗಳ ಇತಿಹಾಸ ಉಳ್ಳ ಈ ಕರದಂಟನ್ನು ಪ್ರವಾಸ ಹಾಗೂ ಉಪವಾಸಕ್ಕೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಸಿಹಿ ತಿಂಡಿ 15 ರಿಂದ 20 ದಿನ ಬಾಳಿಕೆ ಬರುತ್ತದೆ. ಅದರೆ ಈ ಗೋಕಾಕ್ ಕರದಂಟು ಆರು ತಿಂಗಳುಗಳ ಕಾಲ ಇದ್ದರೂ ಕ್ವಾಲಿಟಿ ಕಡಿಮೆ ಆಗಲ್ಲ ಎನ್ನುತ್ತಾರೆ ಗೋಕಾಕ್ ಪಟ್ಟಣದ ಶಂಕರ್ ದೇವರಮನಿ ಮಳಿಗೆಯ ಮಾಲಕರು.




-ಮಂಜುಳಾ ಪ್ರಕಾಶ್

ಪ್ರಥಮ ಎಂಸಿಜೆ ವಿದ್ಯಾರ್ಥಿನಿ, 

ಆಳ್ವಾಸ್ ಕಾಲೇಜು ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top