ಮಲ್ಲೇಶ್ವರದಲ್ಲಿ 4 ಮತ್ತು 5 ರಂದು ಸಂಗೀತ ಮಹೋತ್ಸವ

Upayuktha
0

 



  • 6ನೇ ವರ್ಷದ ನಾದ- ವಾದನ ಸಮಾರಾಧನೆ
  • ವಿದುಷಿ ರಂಜಿನಿ ಸಿದ್ಧಾಂತಿ ನೇತೃತ್ವ
  • ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಆಯೋಜನೆ


ಬೆಂಗಳೂರು: ಬೆಂಗಳೂರಿನ ಯಶವಂತಪುರದ ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಹಾಗೂ ಭೋಪಾಲ್‌ನ ಸ್ವರಾಲಯ ಸಂಗೀತ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ 6ನೇ ವರ್ಷದ ಸಂಗೀತ ಮಹೋತ್ಸವ ಜ. 4 ಮತ್ತು 5 ರಂದು ಆಯೋಜನೆಗೊಂಡಿದೆ.


ಮಲ್ಲೇಶ್ವರ 6ನೇ ಮುಖ್ಯರಸ್ತೆ 17ನೇ ತಿರುವಿನ ಭೂಮಿಕಾ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಎಂದು ವಿದುಷಿ ರಂಜಿನಿ ಸಿದ್ಧಾಂತಿ ತಿಳಿಸಿದ್ದಾರೆ. ಜ. 4ರ ಬೆಳಗ್ಗೆ 9:30ಕ್ಕೆ ಖ್ಯಾತ ಮೃದಂಗ ವಿದ್ವಾಂಸ ಡಾ. ಎನ್.ಜಿ. ರವಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ, ವಿಶ್ವವಿಖ್ಯಾತ ಮೃದಂಗ ವಿದ್ವಾಂಸ ವಿದ್ವಾನ್ ಎಚ್.ಎಸ್. ಸುಧೀಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಸಂಗೀತ ಪ್ರಾತ್ಯಕ್ಷಿಕೆ ಆಯೋಜನೆಗೊಂಡಿದೆ. ಮಾನಸಿಕ ಸ್ಥಿಮಿತದಲ್ಲಿ ಸಂಗೀತದ ಪಾತ್ರ- ಸದ್ಗುರು ಶ್ರೀ ತ್ಯಾಗರಾಜರ ಕೃತಿಗಳ ಸಾರ- ವಿಷಯ ಕುರಿತು ವಿದುಷಿ ಡಾ. ಮೀನಾಕ್ಷಿ ರವಿ ಅವರು ಪ್ರೌಢ ಉಪನ್ಯಾಸದೊಂದಿಗೆ  ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.


ಲಯ ವೈಭವ’ ತನಿ ಆವರ್ತನ

ಮಧ್ಯಾಹ್ನ 12:30ಕ್ಕೆ ‘ಲಯ ವೈಭವ’ ತನಿ ಆವರ್ತನ ಇದೆ. ವಿದ್ವಾನ್ ಡಾ. ಎಂ.ಜಿ. ರವಿ ಮೃದಂಗ, ವಿದ್ವಾನ್ ಗುರು ಪ್ರಸನ್ನ ಅವರು ಖಂಜಿರ ವಾದನದಲ್ಲಿ ರಂಜಿಸಲಿದ್ದಾರೆ. ಮಧ್ಯಾಹ್ನ 2:45 ಕ್ಕೆ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ವಿದ್ವಾನ್. ಎಂ. ಶೇಷಗಿರಿ ಆಚಾರ್ಯ ಮಾಡಿರುವ ರಚನೆಗಳ ಶಿಬಿರದಲ್ಲಿ ಭಾಗವಹಿಸಿದ್ದ ಕಲಾವಿದರಿಂದ ಕಾರ್ಯಕ್ರಮ ನೆರವೇರಲಿದೆ ಮಧ್ಯಾಹ್ನ 3:20ಕ್ಕೆ ವಿದ್ಯಾರ್ಥಿಗಳಿಂದ ಮೃದಂಗ ವಾದನ ಕಾರ್ಯಕ್ರಮವಿದೆ.


ವಿದ್ವಾನ್ ಸುಧೀಂದ್ರ ಅವರಿಗೆ ಪ್ರಶಸ್ತಿ ಪ್ರದಾನ:

ಜ.4ರ ಸಂಜೆ 4:30ಕ್ಕೆ ಪ್ರಶಸ್ತಿ ಪ್ರದಾನ ನೆರವೇರಲಿದೆ. ಖ್ಯಾತ ಮೃದಂಗ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರಿಗೆ ‘ನಾದಲಯ ಸಿದ್ದಾಂತ’  ಪ್ರಶಸ್ತಿ (ಸರೋಜಾ- ಭೀಮ ಭಟ್ ಸಿದ್ಧಾಂತಿ ಸ್ಮರಣಾರ್ಥ) ಪ್ರದಾನ ನೆರವೇರಲಿದೆ. ಹಿರಿಯ ಗಾಯಕ ವಿದ್ವಾನ್ ಎಸ್. ಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕೊಳಲು ವಿದ್ವಾಂಸ ಎಸ್.ಎ. ಶಶಿಧರ ಹಾಗೂ ವಿದ್ವಾನ್ ಡಾ. ಎನ್.ಜಿ. ರವಿ ಭಾಗವಹಿಸಲಿದ್ದಾರೆ.


ಕಲಾವತಿ ಅವಧೂತ ಗಾಯನ: 4ರ ಸಂಜೆ 6ಕ್ಕೆ ಹಮ್ಮಿಕೊಂಡಿರುವ ವಿಶೇಷ ಕಚೇರಿಯಲ್ಲಿ ಹಿರಿಯ ಕಲಾವಿದೆ ಕಲಾವತಿ ಅವಧೂತ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡಿ ರಂಜಿಸಲಿದ್ದಾರೆ.



ವಿವೇಕ ಸದಾಶಿವಂ ಗಾನಸುಧೆ:

ಜ. 5ರಂದು ಬೆಳಗ್ಗೆ 9:15ಕ್ಕೆ ಮೃದಂಗ ವಿದ್ವಾಂಸ ಎಚ್.ಎಲ್. ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9:30 ರಿಂದ 10.30 ರವರೆಗೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮವಿದೆ. 10:45 ಕ್ಕೆ ಖ್ಯಾತ ಗಾಯಕ ವಿದ್ವಾನ ವಿವೇಕ ಸದಾಶಿವಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನೆರವೇರಲಿದೆ. ಮೃದಂಗದಲ್ಲಿ ವಿದ್ವಾನ್ ಸುಧೀಂದ್ರ, ಪಿಟೀಲು ವಾದನದಲ್ಲಿ ಮತ್ತೂರು ಆರ್. ಶ್ರೀನಿಧಿ, ಘಟದಲ್ಲಿ ಓಂಕಾರ ರಾವ್ ಸಹಕಾರ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕಿ, ವಿದುಷಿ ರಂಜಿನಿ ಸಿದ್ಧಾಂತಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top