ಮಂಗಳೂರು: ಮುಡಾ ಕಚೇರಿ ಕಾಂಗ್ರೆಸ್ ಕಚೇರಿ ಆಗಿದೆಯೆ? ಡಾ. ಭರತ್ ಶೆಟ್ಟಿ ಪ್ರಶ್ನೆ

Upayuktha
0


ಮಂಗಳೂರು: ಮುಡಾ ಕಚೇರಿಯಲ್ಲಿ ಮಧ್ಯವರ್ತಿ ಹಾಗೂ ಪ್ರಮುಖ ಪಕ್ಷವೊಂದರಲ್ಲಿ ಕಾರ್ಯಕರ್ತ ನಾಗಿರುವ ಪುಡಾರಿಯೊಬ್ನ ಅನಧಿಕೃತವಾಗಿ ಕಡತವನ್ನೇ ತಿದ್ದುಪಡಿ ಮಾಡಿದ್ದನ್ನು ನೋಡಿದರೆ ಮುಡಾ ಕಚೇರಿ ಕಾಂಗ್ರೆಸ್ ಕಚೇರಿ ಆಗಿದೆಯೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.


ಕಡತವನ್ನು ಪೆನ್‌ನಲ್ಲಿ ತಿದ್ದುವ ವೀಡಿಯೋ ಬಹಿರಂಗಗೊಂಡಿದೆ. ರಾಜಾರೋಷವಾಗಿ ಇಂತಹ ಅಕ್ರಮ ಕೆಲಸ ಮಾಡಲು ಮಧ್ಯವರ್ತಿಯೊಬ್ಬನಿಗೆ ಅಧಿಕಾರ ಕೊಟ್ಟವರು ಯಾರು? ಈತ ಕಾಂಗ್ರೆಸ್ ಕಾರ್ಯಕರ್ತನಾಗಿರುವುದರಿಂದ ಪೊಲೀಸ್ ಕೇಸ್ ದಾಖಲಿಸಲೂ ಅಧಿಕಾರಿಗಳು ಹಿಂದೆ ಮುಂದೆ ನೋಡುವಂತಾಗಿದೆ.


ಮಹತ್ವದ ಕಡತಗಳು ಕೂಡ ಅಕ್ರಮ ತಿದ್ದುಪಡಿಯಾಗಿರುವ ಸಾಧ್ಯತೆಯಿದ್ದು ಅಕ್ರಮವನ್ನು ಸಕ್ರಮ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ. ಪ್ರಕರಣವನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಒತ್ತಾಯಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top