ಬಳ್ಳಾರಿ: ಸಂಕ್ರಾತಿ ಹಬ್ಬದ ನಿಮಿತ್ತ `ಸಂಚಾರ ಸಂಕ್ರಾಂತಿ ರಂಗೋಲಿ ಸಂಪ್ರೀತಿ' ಎಂಬ ಘೋಷವಾಕ್ಯದಡಿ ರಂಗೋಲಿ ಪ್ರಿಯರಾದ ಮಹಿಳೆಯರಿಗಾಗಿ `ರಂಗೋಲಿ ಸ್ಪರ್ಧೆ' ಜ.12 ರಂದು ಭಾನುವಾರ ಬೆಳಗ್ಗೆ 7:30 ಗಂಟೆಗೆ ನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್, ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಾಲಿಕೆ 3ನೇ ವಾರ್ಡ್ ಸದಸ್ಯ ಎಂ. ಪ್ರಭಂಜನ್ ಕುಮಾರ್ ನೇತೃತ್ವದಲ್ಲಿ `ರಂಗೋಲಿ ಸ್ಪರ್ಧೆ'ಯನ್ನು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು `ರಂಗೋಲಿ ಸ್ಪರ್ಧೆ'ಯನ್ನು ಉದ್ಘಾಟಿಸಲಿದ್ದಾರೆ.
ಪಾಲಿಕೆ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ರೂಟ್ಸ್ ಪಬ್ಲಿಕ್ ಶಾಲೆಯ ಮುಖ್ಯಗುರು ಎಂ. ನಿರುಪಮಾ ಅವರು ನಿರ್ಣಾಯಕರಾಗಿ ಉಪಸ್ಥಿತರಿರಲಿದ್ದಾರೆ.
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ನಗರದ ಆಸಕ್ತ ಮಹಿಳೆಯರು, ರಂಗೋಲಿ ಪ್ರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 7338466625 ಈ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ