ಸಚಿವರನ್ನೇ ಮಾಯ ಮಾಡಿದ ಜಾದೂಗಾರ ಸೇಡಂ ಉತ್ಸವಕ್ಕೆ!

Upayuktha
0


ಸೇಡಂ: ಸಚಿವರನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಮಾಯ ಮಾಡಿದ ವಿಶ್ವ ವಿಖ್ಯಾತ ಜಾದೂಗಾರ ಕುಂದ್ರೋಳಿ ಗಣೇಶ್ ಜ. 29 ರಂದು ಸಾಯಂಕಾಲ 7.30 ಕ್ಕೆ ಸೇಡಂ ನಲ್ಲಿ ಸಿದ್ದರಾಮ ಜಂಬಲದಿನ್ನಿ ವೇದಿಕೆಯಲ್ಲಿ ವಿಸ್ಮಯದ ಜಾದೂ ಪ್ರದರ್ಶಿಸಲಿರುವರು. 


ಮಂಗಳೂರಿನ ಪುರಭವನದಲ್ಲಿ ಅಂದಿನ ಸಚಿವರಾಗಿದ್ದ ರಮಾನಾಥ ರೈಯವರನ್ನು ವೇದಿಕೆಗೆ ಕರೆಸಿ ಅಲ್ಲಿಂದ ಮಾಯಗೊಳಿಸಿ ನಗರದ ಪ್ರಕ್ಷಾತ ಹೋಟೆಲ್ ಮೋತಿ ಮಹಲ್ ನಲ್ಲಿ ಪ್ರತ್ಯಕ್ಷ ಗೊಳಿಸಿ ಬಾರಿ ಸುದ್ದಿಗೆ ಕಾರಣರಾಗಿದ್ದರು. ವಿಜಯಪುರದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಆಗಿ ನಡೆಸಿ ರಾಕೇಶ್ ಸಿಂಗ್ ಅವರನ್ನು ವೇದಿಕೆಗೆ ಕರೆಸಿ ಕ್ಷಣಾರ್ಧದಲ್ಲಿ ಮಾಯ ಮಾಡಿ ಗೋಲಗುಂಬಜ್‌ನಲ್ಲಿ ಪ್ರತ್ಯಕ್ಷಗೊಳಿಸಿ, ಜಗತ್ತಿನಲ್ಲಿ ಖ್ಯಾತಿಯನ್ನು ಗಳಿಸಿದರು. ಇದರಿಂದಾಗಿ ಗಣೇಶ್ ಮಾಯ ಮಾಡುವ ಜಾದೂಗಾರ ಎಂದು ಖ್ಯಾತಿ ಪಡೆದರು.


ಮುಂಬೈನಲ್ಲಿ ನಡೆದ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಜಾದು ಮಾಡುತ್ತಾ ಮೂಕ ವಿಸ್ಮಯಗೊಳಿಸಿದವರು. ಈ ಜಾದೂಗಾರ ಜಗತ್ತಿನಾದ್ಯಂತ ಸಂಚರಿಸಿ ಜನಪದೀಯ ಸ್ಪರ್ಶದ ಭಾರತೀಯ ಸಂಸ್ಕೃತಿಯನ್ನು ವಿಜೃಂಭಿಸುವ ಜಾದೂ ಪ್ರದರ್ಶನ ನೀಡಿ ಜನಪ್ರಿಯರಾದವರು. ತಮ್ಮ ತಂಡದ 12ಕ್ಕೂ ಹೆಚ್ಚು ಮಂದಿಯ ಜೊತೆ ಸೇಡಂನ ಭಾರತೀಯ ಸಂಸ್ಕೃತಿ ಉತ್ಸವದ ವೇದಿಕೆಯಲ್ಲಿ ಜ.29ರಂದು ವಿಸ್ಮಯ ಜಾದೂ ಪ್ರದರ್ಶನ ನೀಡಿ ಅಚ್ಚರಿಯ ಕ್ಷಣಗಳನ್ನು ಸೃಷ್ಟಿಸಲಿದ್ದಾರೆ. ಇಂತಹ ಅಪೂರ್ವ ಪ್ರದರ್ಶನ ನೋಡಲು ಉತ್ಸವವು ಸುವರ್ಣಾವಕಾಶ ಕಲ್ಪಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top