ಮಧೂರು ಬ್ರಹ್ಮಕಲಶೋತ್ಸವ: ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿ ರಚನಾ ಸಭೆ

Upayuktha
0


ಕಾಸರಗೋಡು: ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು 2025 ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಆಯೋಜಿಸಲಾಗಿದೆ.


ನಮ್ಮ ನಾಡಿನ ಪ್ರಸಿದ್ಧ ಮಹೋತ್ಸವದ ಯಶಸ್ಸಿಗಾಗಿ ನಾಡಿನ ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ ಸಮಿತಿ ರಚಿಸುವ ಕಾರ್ಯ ಸಾಗುತ್ತಾ ಇದೆ.

ಈ ಉದ್ದೇಶದೊಂದಿಗೆ ಅಮ್ಮಂಗೋಡು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜ.12ರಂದು ಭಾನುವಾರ ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿ ರಚನಾ ಸಭೆ ಜರಗಿತು.


ಶ್ರೀ ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷ ಸ್ಥಾನ ವಹಿಸಿ ದಿಕ್ಸೂಚೀ ಮಾತುಗಳನ್ನಾಡಿದರು. ರಾಜನ್ ಮುಳಿಯಾರು ಬ್ರಹ್ಮಕಲಶದ ಬಗ್ಗೆ ವಿವರಿಸಿದರು.

ಗೋವಿಂದಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.


ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ರಾಘವೇಂದ್ರ ಉಡುಪುಮೂಲೆ ಗೌರವಾಧ್ಯಕ್ಷರು, ಸದಾಶಿವ ಭಟ್ ಮುಂಡಪ್ಪಳ್ಳ ಅಧ್ಯಕ್ಷರು, ಹರಿಶ್ಚoದ್ರ ಗೋಳಿಯಡ್ಕ, ಜಗದೀಶ ಅಮ್ಮಂಗೋಡು ಉಪಾಧ್ಯಕ್ಷರು, ಪುರುಷೋತ್ತಮ ಗೋಳಿಯಡ್ಕ ಪ್ರಧಾನ ಕಾರ್ಯದರ್ಶಿ, ಶಮಂತ್ ಗೋಳಿಯಡ್ಕ, ಪ್ರಿಯ ಗೋಳಿಯಡ್ಕ, ಅನುಷಾ ಗೋಳಿಯಡ್ಕ ಜತೆ ಕಾರ್ಯದರ್ಶಿ, ಜ್ಯೋತಿ ಅಮ್ಮಂಗೋಡು ಕೋಶಾಧಿಕಾರಿ, ಮತ್ತು ಸದಸ್ಯರುಗಳನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಮಹಿಳಾ ಸಮಿತಿಗೆ ಸಂಯೋಜಕರಾಗಿ ವಿಜಯಲಕ್ಷ್ಮಿ ಗೋಳಿಯಡ್ಕ ಅವರನ್ನು ಪುನರಾಯ್ಕೆ ಮಾಡಲಾಯಿತು.


ಸಮಿತಿಯ ಪ್ರಧಾನ ಸಂಯೋಜಕರಾಗಿ ಪ್ರಕಾಶ ಅಮ್ಮಂಗೋಡು ಮತ್ತು ಉಪ ಸಂಯೋಜಕರಾಗಿ ರಾಜೇಂದ್ರ ಗೋಳಿಯಡ್ಕ ಇವರನ್ನು ಆಯ್ಕೆ ಮಾಡಲಾಯಿತು.  


ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ೦ತರಿಸಲಾಯಿತು. ಆಯ್ಕೆ ಮಾಡಲಾದ ಪದಾಧಿಕಾರಿಗಳು ಸ್ಥಾನವನ್ನು ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಕಾಶ ಅಮ್ಮಂಗೋಡು ಸ್ವಾಗತಿಸಿ ಪುರುಷೋತ್ತಮ ಗೋಳಿಯಡ್ಕ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top