ಅನೇಕ ಕಾದಂಬರಿಗಳು, ಕಥೆಗಳು, ಲೇಖನಗಳನ್ನು ಬರೆದು ಪ್ರಸಿದ್ಧಿ ಆಗಿರುವ ಬೆಳಗೆರೆ ಸುಮಾ ಅವರು ತಮ್ಮದೇ ಆದ ಛಾಪನ್ನು ಕನ್ನಡ ಸಾಹಿತ್ಯದಲ್ಲಿ ಮೂಡಿಸಿದ್ದಾರೆ. ಇವರಿಗೆ ಶ್ರೀ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ತಾತ ಆಗಿರುವುದು, ಸಹಜವಾಗಿ ಸಾಹಿತ್ಯದಲ್ಲಿ ಆಸಕ್ತಿ ಅನುವಂಶೀಯವಾಗಿ ಬಂದಿದೆ. ರಾಜೀವ ಲೋಚನ ಶಾಸ್ತ್ರೀ ಮತ್ತು ಲೋಲಾಂಬ ದಂಪತಿಗಳ ಪುತ್ರಿಯಾಗಿ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕ ಹಳ್ಳಿಯಾದ ಬೆಳಗೆರೆಯಲ್ಲಿ ಜನಿಸಿದರು. ಜೆ ಆರ್ ಸಂಜೀವಮೂತಿ೯ ಅವರನ್ನು ವಿವಾಹ ಮಾಡಿಕೊಂಡರು. ಪ್ರಸ್ತುತ ಬೆಳಗೆರೆ ಸುಮಾ ಅವರು ತುಮಕೂರಿನಲ್ಲಿ ವಾಸವಾಗಿದ್ದಾರೆ.
ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಯಾಗಿ ಮಾಡಿ ಎಲ್ಲಾ ಕನ್ನಡ ಬಂಧುಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಇದುವರೆಗೂ ಸುಮಾರು 29ಕಾದಂಬರಿಗಳು, 35 ಸಣ್ಣಕಥೆಗಳು, 116 ಮಕ್ಕಳ ಕಥೆಗಳು, ಹಾಗೂ ಅನೇಕ ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಬರೆದು ಪ್ರಸಿದ್ಧರಾದ ಬರಹಗಾರರು. ಇವರ ಕಾದಂಬರಿಗಳ ಶೀಷಿ೯ಕೆ, ಓದುಗರನ್ನು ಪುಟ ತೆರೆದು ಓದಲು ತೀವ್ರ ಕುತೂಹಲ ಬರದೇ ಇರಲಾರದು. ಮುಖಪುಟ, ಮುನ್ನುಡಿ, ಕಥೆಯ ವಸ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉದಾಹರಣೆಗೆ ಸಾಮಾಜಿಕ ಕಾದಂಬರಿ ಮುಖಪುಟದ "ಒಲವೇ ವಿಸ್ಮಯ", 'ನನ್ನೊಲವ ಪಯಣ ನಿನ್ನೊಂದಿಗೆ' ಅತಿ ಸೊಗಸಾಗಿ ಆಕರ್ಷಕವಾಗಿ ಓದುಗರನ್ನು ಓದಲು ಪ್ರೇರೇಪಿಸುತ್ತದೆ.
ಬೆಳಗೆರೆ ಸುಮಾ ಅವರು ಮೊದಲು ಚಳ್ಳಕೆರೆಯಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಶಾಲೆಯಲ್ಲಿ ಹತ್ತು ವರ್ಷ ಮುಖ್ಯೋಪಾಧ್ಯಾಯಿನಿ ವೃತ್ತಿಯ ಸೇವೆ ಮಾಡಿದ್ದಾರೆ. ಮಂಗಳ ಕಲಾ ಸಾಹಿತ್ಯ ವೇದಿಕೆಯಲ್ಲಿ ಸಹ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು ಪ್ರಕಟವಾಗಿವೆ. ಇವರ ಅನೇಕ ಕೃತಿಗಳು ಗುರುರಾಜ ಪ್ರಕಾಶನ, ಚಾವಡಿ ಪ್ರಕಾಶನ, ಕೆ ಕೆ ಪ್ರಿಂಟರ್ಸ್, ಹೇಮಂತ ಪ್ರಕಾಶನ, ಸಿ ವಿ ಜಿ ಪಬ್ಲಿಕೇಷನ್ಸ್ ಪ್ರಕಟ ಮಾಡಿವೆ. 1992 ರಲ್ಲಿ ಇವರ ತಾತನವರಾದ ಬೆಳಗೆರೆ ಕೃಷ್ಣ ಶಾಸ್ತ್ರೀ ಅವರಿಂದ ಕವಿಗೋಷ್ಠಿಯಲ್ಲಿ ಪ್ರಥಮ ಬಹುಮಾನ ಸ್ವೀಕರಿಸಿದ್ದು ವಿಶೇಷ.
ಇವರಿಗೆ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅನೇಕ ಪುರಸ್ಕಾರಗಳು, ಗೌರವಗಳು ಲಭಿಸಿವೆ. ಮಹಿಳಾ ಸಾಧಕಿ ಪ್ರಶಸ್ತಿ, ಸ್ಕಂದ ವಿವಿಧೋದ್ದೇಶ ಮಹಿಳಾ ಅಭಿವೃದ್ಧಿ ವೇದಿಕೆ ಅವರಿಂದ ಲಭಿಸಿದೆ. ಹಾಸ್ಯ ಕವಿಗೋಷ್ಠಿಯಲ್ಲಿ ಬಹುಮಾನ ಲಭಿಸಿದೆ. ಕನ್ನಡ ಸೇವಾರತ್ನ ಪ್ರಶಸ್ತಿ ಲಭಿಸಿದೆ. ಕವಿರತ್ನ ಪ್ರಶಸ್ತಿ, ಸರ್ ಎಂ ವಿ ಅವರ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಕರುನಾಡು ಸಾಹಿತ್ಯ ಸೇವಾ ಪ್ರಶಸ್ತಿ, ಇದಲ್ಲದೆ ತುಮಕೂರಿನಲ್ಲಿ ಭಾಗೀರತಮ್ಮ ದತ್ತಿ ಪ್ರಶಸ್ತಿ, ಕಸಾಪದಿಂದ ಲಭಿಸಿದೆ. ತುಮಕೂರು ಲೇಖಕಿಯರ ಸಂಘದಿಂದ ಬಹುಮಾನ, ಗೌರವಗಳು ಮತ್ತು ಪುರಸ್ಕಾರಗಳು ಸನ್ಮಾನಗಳು ಲಭಿಸಿ ತುಮಕೂರಿನಲ್ಲಿ ಪ್ರಸಿದ್ಧ ಲೇಖಕಿ ಎಂದು ಗುರುತಿಸಲಾಗಿದೆ.
ಹಿಮಾಲಯದಲ್ಲಿ ಹತ್ತು ದಿನಗಳು, ದೇವಭೂಮಿ-ಪುಣ್ಯ ಭೂಮಿ, ಮುಗಿಯದ ಕಥೆ, ಮಾಯಾಜಿಂಕೆ, ಮಂತಾದ ಆಕರ್ಷಕ ಮುಖಪುಟದ ಕಾದಂಬರಿಗಳು ಜನರ ಮೆಚ್ಚುಗೆಗೆ ಪಾತ್ರವಾದ ಬರಹಗಳು. ಲೇಖಕಿಯರ ಸಾಹಿತ್ಯ ಮಂಥನದಿಂದ ಇವರ ಕೃತಿ ಬಿಡುಗಡೆಗೊಂಡು, ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್ ಗೌರವಿಸಿ ಸನ್ಮಾನಿಸಿದ್ದು ವಿಶೇಷ. ಕೆಂಪೇಗೌಡ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ, ಗೌರವಕ್ಕೆ ಪಾತ್ರರಾದ ಕಾದಂಬರಿಕಾರರು.
ಇತ್ತೀಚೆಗೆ ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸಿದ್ದ ಗೋ.ರು ಚನ್ನಬಸಪ್ಪ ಅವರನ್ನು ತುಮಕೂರಿನ ಲೇಖಕಿಯರ ಸಂಘದವರು ಸೇರಿ, ಸನ್ಮಾನ ಮಾಡಿದರು.
ಸದಾ ಬರವಣಿಗೆಯಲ್ಲಿ ನಿರತರಾಗಿ, ಅನೇಕ ಕನ್ನಡ ಸಂಘಸಂಸ್ಥೆಗಳಿಗೆ ಆಹ್ವಾನಿತರಾಗಿ, ಯಶಸ್ವಿ ಗೊಳಿಸುತ್ತಾ ಎಲ್ಲರ ಪ್ರೀತಿ ಸಂಪಾದಿಸಿ, ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ಸುಮಾ ಬೆಳಗೆರೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಲಭಿಸಲಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ