ಶಾಸ್ತ್ರೀಯ ಕಲೆಗಳು ಆತ್ಮ ಮತ್ತು ಪರಮಾತ್ಮನ ಸೇತುವೆ: ಶ್ರೀ ಶ್ರೀ ಸಚ್ಚಿದಾನಂದ ಶ್ರೀಗಳು

Upayuktha
0


ಮಂಗಳೂರು: ಭಾರತೀಯ ಶಾಸ್ತ್ರೀಯ ಕಲಾಪ್ರಕಾರಗಳು ಆತ್ಮವನ್ನು ಪರಮಾತ್ಮ ನಡೆಗೆ ಕೊಂಡೊಯ್ಯುವ ಒಂದು ಕಲಾಪ್ರಕಾರವಾಗಿದೆ ಇದನ್ನು ಅಷ್ಟೇ ಶ್ರದ್ಧೆಯಿಂದ ಆರಾಧಿಸಿ ಪ್ರದರ್ಶಿಸಿದಾಗ ಮನುಷ್ಯನಲ್ಲಿ ಸಾತ್ವಿಕ ಭಾವನೆ ಉಂಟಾಗುತ್ತದೆ ಎಂದು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ನುಡಿದರು.


ಅವರು ಇತ್ತೀಚೆಗೆ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಸುರತ್ಕಲಿನ ವಿದ್ಯಾದಾಯಿನಿ ಕಲಾಮಂದಿರದಲ್ಲಿ ಆಯೋಜಿಸಿರುವ 40ರ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವದಿಸಿದರು. ಕಳೆದ 40 ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿ ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿರುವ ಸಂಸ್ಥೆಯ ರೂವಾರಿ ಚಂದ್ರಶೇಖರ ನಾವಡರು ಅಭಿನಂದನಾರ್ಹರು ಎಂದರು.


ನಾಟ್ಯಾಂಜಲಿ ಸಂಸ್ಥೆಯ ಗೌರವಾರ್ಪಣೆಯನ್ನು ಎಚ್ ಯು ಅನಂತಯ್ಯ, ಎಸ್ ಸುಬ್ರಾಯ ಹಾಲಂಬಿ ಕುಂದಾಪುರ, ವೆಂಕಟರಮಣ ಐತಾಳ್ ಕೋಟೇಶ್ವರ, ಪಿ ಪುರುಷೋತ್ತಮ ರಾವ್ ಕೃಷ್ಣಾಪುರ, ತಿರುಮಲೇಶ್ವರ ಭಟ್ ಕಲ್ಲಡ್ಕ, ಸರ್ವೋತ್ತಮ ಅಂಚನ್ ಮುಲ್ಕಿ, ಪಿ ಸುಧಾಕರ ಬೈಂದೂರು,  ಪೂರ್ಣಿಮಾ ಸಿ ಕದ್ರಿ ಇವರಿಗೆ ಕೊಡಮಾಡಲಾಯಿತು.


ಕೊನೆಯಲ್ಲಿ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ ಚಂದ್ರಶೇಖರ ನಾವಡ ಇವರ ನಿರ್ದೇಶನದಲ್ಲಿ 'ರಸ ಗಣಪತಿ' ಎಂಬ ಶಾಸ್ತ್ರೀಯ ನೃತ್ಯ ಸಂಪದವು ಸಂಸ್ಥೆಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಜರಗಿತು. ಹಿಮ್ಮೇಳ ಕಲಾವಿದರಾಗಿ ಪವಿತ್ರ ವಿನಯ್, ಶ್ರೀ ಬಾಲಚಂದ್ರ ಭಾಗವತ್, ಶ್ರೀಧರ್ ಆಚಾರ್ಯ ಪಾಡಿಗಾರ್ ರವರು ಸಹಕರಿಸಿದರು. ರಾಜಶ್ರೀ ಶ್ರೀಕಾಂತ್ ರಾವ್ ಪ್ರಾರ್ಥಿಸಿದರು. ದಾಮೋದರ ಶರ್ಮರು ನಿರೂಪಿಸಿದರು. ವಿದ್ವಾನ್ ಕೆ ಚಂದ್ರಶೇಖರ ನಾವಡರು ಸ್ವಾಗತಿಸಿ ಧನ್ಯವಾದ ನೀಡಿದರು. ಟ್ರಸ್ಟಿ ಸುಮಾ ಸಿ ನಾವಡ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top