ಗೋಕರ್ಣ ಗಂಗೆಕೊಳ್ಳ ಸಮುದ್ರದಲ್ಲಿ ಬೋಟ್ ಪಲ್ಟಿ; ನಾಲ್ವರ ರಕ್ಷಣೆ

Upayuktha
0




ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಿ ನೀರುಪಾಲಾಗಿದ್ದ ನಾಲ್ವರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಗಂಗೆಕೊಳ್ಳದ ಸಮುದ್ರದಲ್ಲಿ ಇಂದು ಘಟನೆ ನಡೆದಿದೆ.


ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಾಳಿ ಅಬ್ಬರಕ್ಕೆ ಪಲ್ಟಿಯಾಗಿ ಇಂದು ಮುಳುಗಡೆಯಾಗಿತ್ತು. ಬೋಟ್‌ನಲ್ಲಿ ಇದ್ದ ನಾಲ್ಕು ಜನ ಸಮುದ್ರಪಾಲಾಗಿದ್ದರು.


ಆ ವೇಳೆಗೆ ಅಲ್ಲಿಯೇ ಬರುತ್ತಿದ್ದ ಮಂಗಳೂರಿನ ಒಶಿಯನ್ ಬ್ಲೂ ಹೆಸರಿನ ಬೋಟ್ ಮೀನುಗಾರರು ನೀರಿನಲ್ಲಿರುವುದನ್ನು ಗಮನಿಸಿ ಅಲ್ಲಿಗೆ ತೆರಳಿ ನಾಲ್ಕು ಜನರನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ನಾಲ್ಕು ಜನ ಸುರಕ್ಷಿತವಾಗಿದ್ದು ದಡಕ್ಕೆ ಕರೆತರಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top