ಕಾರ್ಕಳ: ನಿಟ್ಟೆ ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್‌ರವರ ಅಧಿಕೃತ ಭೇಟಿಯ ಸುಸಂದರ್ಭದಲ್ಲಿ ಕೆರಿಯರ್ ಗೈಡೆನ್ಸ್ ಸಪ್ತಾಹವನ್ನು ಚಾಲನೆ ನೀಡಿದರು. ಇತ್ತೀಚಿಗೆ ಡಾ.ಎನ್. ಎಸ್.ಎ.ಎಂ. ಕನ್ನಡ ವಿಭಾಗದ ಹೈಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರಾಷ್ಟ್ರೀಯ ತರಬೇತುದಾರ ಸುಧಾಕರ ಎಂ. ಪೂಜಾರಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಡಾ.ಎನ್.ಎಸ್.ಎ.ಎಂ. ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಮಕ್ಕಳಿಗೆ ರೊ.ಕೆ.ಬಿ.ರಾವ್ ಮಾಹಿತಿ ನೀಡಿದರು.
ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ
ನಿಟ್ಟೆ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿಯ ಸುಸಂದರ್ಭದಲ್ಲಿ ಕೆ.ಎಸ್.ಹೆಗ್ಡೆ. ಡೆಂಟಲ್ ಕ್ಲಿನಿಕ್ ಮತ್ತು ನಿಟ್ಟೆ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಡೆಂಟಲ್ ಕ್ಯಾಂಪ್ ಅನ್ನು ಸರಕಾರಿ ಪ್ರೌಢಶಾಲೆ ಕಲ್ಯಾ ಇಲ್ಲಿ ಹಮ್ಮಿಕೊಳ್ಳಲಾಯಿತು.
ನಿಟ್ಟೆ ಡೆಂಟಲ್ ಸೆಂಟರ್ನ ಮುಖ್ಯ ಅಧೀಕ್ಷಕಿ ಡಾ. ಚೇತನ ಶಶಿಕಾಂತ ಮತ್ತು ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಡೆಂಟಲ್ ಕಾಲೇಜು ಇಲ್ಲಿಯ ತಂಡ ನೇತೃತ್ವ ವಹಿಸಿದ್ದರು.
ಸುಮಾರು 151 ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಕೆ.ಸತೀಶ್ ಕುಮಾರ್, ಜಿಲ್ಲಾ ಗವರ್ನರ್ ರೊ.ಎಂ.ಪಿ.ಹೆಚ್.ಎಫ್. ದೇವಾನಂದ್, ಸಹಾಯಕ ಗವರ್ನರ್ ರೊ.ಅನಿಲ್ ಡೇಸ. ರೊ. ಸುರೇಶ ನಾಯಕ್.
ರೋಟರಿ ಕ್ಲಬ್ ನಿಟ್ಟೆಯ ಹಿರಿಯ ಸದಸ್ಯರಾದ ರೊ. ಯೋಗೀಶ್ ಹೆಗ್ಡೆ, ರೊ.ವೀಣಾ ದೇವಿ, ರೊ. ಕೃಷ್ಣ ಪ್ರಸಾದ್, ರೊ. ಸುಧಾಕರ್ ಕೋಟ್ಯಾನ್, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕ ಸುಭಾಷ್ ಚಂದ್ರ ಶೆಟ್ಟಿಗಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ