ಫರಂಗಿಪೇಟೆ: ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ, ಧಾರ್ಮಿಕ ಸಭೆ

Upayuktha
0

ಪರಮ ಶ್ರೇಷ್ಠವಾದ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವು ಭಾಗ್ಯವಂತರು: ಕು. ಹಾರಿಕಾ ಮಂಜುನಾಥ್




ಬಂಟ್ವಾಳ: ಮಹಾನ್ ಧರ್ಮ ಕಾರ್ಯವನ್ನು ಮಾಡಿದ ಆಂಜನೇಯನ ಸಂಘಟಿತ ಬಲ ಹಿಂದೂ ಸಮಾಜಕ್ಕೆ ಅಗತ್ಯವಿದೆ, ಪ್ರತಿ ಹಿಂದೂವಿನ ಮನೆ ಮನಗಳಲ್ಲಿ ಧರ್ಮಜಾಗೃತಿಯ ಅವಶ್ಯಕತೆ ಇದೆ ಪರಮ ಶ್ರೇಷ್ಠವಾದ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು ಎಂದು ಯುವ ವಾಗ್ಮಿ ಕು. ಹಾರಿಕಾ ಮಂಜುನಾಥ್ ಹೇಳಿದರು.


ಅವರು ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ವಿಜಯನಗರದ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ  ಜ. 26ರಂದು ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.


ಪೂಜೆ ಮತ್ತು ಭಜನೆಗಳಿಂದ ಹಿಂದೂ ಧರ್ಮದ ಒಗ್ಗಟ್ಟು ಹಾಗೂ ಜಾಗೃತಿ ಆಗಬೇಕಿದೆ, ನಮ್ಮಲ್ಲಿರುವ ಜಾತಿ, ಮತ, ಪಂತ, ತತ್ವ, ಸಿದ್ಧಾಂತ ಬಿಟ್ಟು ನಾವೆಲ್ಲರೂ ಹಿಂದೂ ಎನ್ನುವ ಭಾವನೆಯಿಂದ ನಮ್ಮ ಮನೆಯ ಕೆಲಸದಂತೆ, ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿಸೋಣ, ಪೂರ್ವಿಕರ ಶ್ರಮ, ಭಗವಂತನ ಅನುಗ್ರಹದಿಂದ ಹಿಂದೂ ಧರ್ಮ ಸದಾ ಜೀವಂತವಿರುತ್ತದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾ ವರ್ಧಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಧನರಾಜ್ ಶೆಟ್ಟಿ ತೇವು ವಹಿಸಿ ಮಾತನಾಡಿ, ದೇವಸ್ಥಾನವು ಹಿಂದೂ ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆಯಲಿ. ಸಮಾಜದ ಏಳಿಗೆಗೆ ಎಲ್ಲರೂ ಜತೆಗೂಡಿ ಕೆಲಸ ಮಾಡೋಣ ಎಂದರು. ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಿದ ಸರ್ವರಿಗೂ ಧನ್ಯವಾದ ತಿಳಿಸಿದರು.


ಈ ಸಂದರ್ಭದಲ್ಲಿ ರಾಜ್ಯ 'ಸಹಕಾರ ರತ್ನ' ಪ್ರಶಸ್ತಿ ಪುರಸ್ಕೃತರಾದ ಕೆ. ರವೀಂದ್ರ ಕಂಬಳಿ ಸುಜೀರುಬೀಡು ಇವರನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಅರ್ಕುಳ ಶ್ರೀ ಉಳ್ಳಾಕ್ಲು ಮಗ್ನಂತಾಯಿ ಕ್ಷೇತ್ರದ ಧರ್ಮದರ್ಶಿ ವಜ್ರನಾಭ ಶೆಟ್ಟಿ ಅರ್ಕುಳಬೀಡು, ಡಾ| ರವೀಶ್ ತುಂಗಾ, ಮನಸ್ವಿನಿ ಆಸ್ಪತ್ರೆ, ಎಂ. ಮಹಾಬಲ ಕೊಟ್ಟಾರಿ ಅಧ್ಯಕ್ಷರು, ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘ ಅರ್ಕುಳ, ಹರೀಶ್ ಕುಮಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪುದು ಗ್ರಾ ಪಂ.ಐತಪ್ಪ ಆಳ್ವ ಸುಜೀರುಗುತ್ತು ಪದ್ಮ ಸರ್ವಿಸಸ್, ಬಿ.ಸಿ.ರೋಡು, ಅಜಿತ್ ಚೌಟ ದೇವಸ್ಯ, ಉದ್ಯಮಿ, ನೈಜೀರಿಯಾ, ಉದ್ಯಮಿ ಉಮೇಶ್ ಸಾಲಿಯಾನ್ ಬೆಂಜನಪದವು, ಚಂದ್ರಶೇಖರ ಗಾಂಭೀರ ಸುಜೀರುಗುತ್ತು ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಆಂಜನೇಯ ದೇವಸ್ಥಾನ, ವಿಜಯನಗರ, ಶ್ರೀ ಆಂಜನದೇವಿ ಮಾತೃ ಸಮಿತಿ ಭುವನೇಶ್ವರಿ ಶೆಟ್ಟಿ ಕುಂಪನಮಜಲು ಇದ್ದರು.


ಮನೋಜ್ ತುಪ್ಪೆಕಲ್ಲು ಸ್ವಾಗತಿಸಿ, ಸುರೇಶ ಶೆಟ್ಟಿ ಬರ್ಕೆ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top