ಮಕ್ಕಳು ದುರ್ಬುದ್ಧಿ, ದುಶ್ಚಟ ಬಿಟ್ಟು ಶಿಕ್ಷಣದ ಕಡೆ ಗುರಿ ಇರಬೇಕಾಗುತ್ತದೆ: ಡಾ. ಬಸವಪ್ರಭು ಸ್ವಾಮೀಜಿ

Upayuktha
0

ದಾವಣಗೆರೆ: ಪ್ರೌಢಶಾಲಾ ಹಂತ ಮಕ್ಕಳ ಜೀವನದ ಒಂದು ತಿರುವು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ, ಶಿಕ್ಷಕಿಯರು ಮಕ್ಕಳ ಕಡೆ ಬದ್ದತೆಯಿಂದ, ಕರ್ತವ್ಯನಿಷ್ಠೆ ಯಿಂದ ಗಮನ ಹರಿಸಬೇಕಾಗಿದೆ. ಮಕ್ಕಳು ಈ ಹಂತದಲ್ಲೇ ಮುಂದಿನ ಸಾಧನೆಗಳ ಸಂಕಲ್ಪ ನಿರ್ಣಯಿಸಬೇಕಾಗಿದೆ.


ಮಕ್ಕಳು ದುರ್ಭುದ್ದಿ, ದುಶ್ಚಟ ಬಿಟ್ಟು ಶಿಕ್ಷಣದ ಕಡೆ ಗುರಿ ಇಟ್ಟಾಗ ಮುಂದಿನ ಭವ್ಯ ದಿವ್ಯ ಸಾಧನೆಗಳಿಗೆ ಭದ್ರವಾದ ಬುನಾದಿಯಾಗುತ್ತದೆ ಎಂದು ವಿರಕ್ತಮಠದ ಗುರುಗಳಾದ ಡಾ. ಬಸವಪ್ರಭು ಸ್ವಾಮೀಜಿಯವರು ಮಕ್ಕಳಿಗೆ ಹಿತವಚನ ವ್ಯಕ್ತಪಡಿಸಿದರು.


ದಾವಣಗೆರೆ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದ ಜಗದ್ಗುರು  ಜಯದೇವ ಸಾಂಸ್ಕೃತಿಕ ಸಭಾಂಗಣದಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 2024-25ನೇ ಸಾಲಿನ  ಎಸ್.ಎಸ್.ಎಲ್.ಸಿ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪರೀಕ್ಷೆಯನ್ನು ಎದುರಿಸುವ ಮಕ್ಕಳಿಗೆ ಧೈರ್ಯ ತುಂಬಿ ಉಚಿತವಾಗಿ ಕಾರ್ಯಾಗಾರದ ಸಾನಿಧ್ಯ ವಹಿಸಿ ಸ್ವಾಮೀಜಿಯವರು ಮಾತನಾಡಿದರು.


ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನದೊಂದಿಗೆ ಕಾರ್ಯಾಗಾರ ನಡೆಸಿಕೊಟ್ಟರು. ಗುರುಗಳ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರ ಶಿಕ್ಷಕ, ಶಿಕ್ಷಕಿಯರ ಅನುಮತಿ ಪಡೆದು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top