ಟ್ರೋಫಿ ಅನಾವರಣ, ತಂಡಗಳ ಹರಾಜು ಪೂರ್ಣ
ಮಂಗಳೂರು: ಮರವೂರು ಶೂಲಿನ್ ಪ್ಯಾಲೇಸ್‌ನ ಹೊರಾಂಗಣದಲ್ಲಿ ಮಂಗಳವಾರ ಬಂಟ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಜರ್ಸಿ ಬಿಡುಗಡೆ ಮತ್ತು ಟ್ರೋಫಿ ಅನಾವರಣ ಹಾಗೂ ತಂಡಗಳ ಹರಾಜು ಕಾರ್ಯಕ್ರಮ ನಡೆಯಿತು. ಯೂತ್ ಬಂಟ್ಸ್ ಮಂಗಳೂರು ನೇತೃತ್ವದಲ್ಲಿ ಫೆ. 7, 8 ಮತ್ತು 9ರಂದು ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಬಂಟ್ ಪ್ರೀಮಿಯರ್ ಲೀಗ್ ಪಂದ್ಯಾಟಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಮಾಜಿ ಶಾಸಕ ಮೋನಪ್ಪ ಭಂಡಾರಿ, ಬಂಟರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಉದ್ಯಮಿ ಸುಂದರ್ ಶೆಟ್ಟಿ, ಯುವ ನಾಯಕ ಮಿಥುನ್ ರೈ, ಕಾವೂರು ಬoಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ, ಉದ್ಯಮಿ ಚಂದ್ರಹಾಸ ಶೆಟ್ಟಿ, ರಾಜ್ ಗೋಪಾಲ್ ರೈ ಭಾಗವಹಿಸಿದ್ದರು.
ಬಂಟ್ ಪ್ರೀಮಿಯರ್ ಲೀಗ್ ಪಂದ್ಯಾಟಗಳನ್ನು ಸಂಘಟಕರಾದ ಸಚಿನ್ ರಾಜ್ ರೈ ಹಾಗೂ ಪ್ರಸಾದ್ ಶೆಟ್ಟಿ ಆಯೋಜಿಸುತ್ತಿದ್ದಾರೆ. ಹೋಟೆಲ್ ಫುಡ್ ಲ್ಯಾಂಡ್ ನ ಮಾಲೀಕರಾದ ಗಣೇಶ್ ಶೆಟ್ಟಿ, ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಭಾಗವಹಿಸುವ ತಂಡಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತುಳುನಾಡಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಬಿಂಬಿಸುವ ಆಹಾರ ಮೇಳ ಕೂಡ ನಡೆಯಲಿದೆ.
ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 10 ತಂಡಗಳು ಭಾಗವಹಿಸುವ. ಈ ಪಂದ್ಯ ಕೂಟದ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದೇ ಸಂದರ್ಭದಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯನ್ನು ಚಲನಚಿತ್ರ ನಟ ರೂಪೇಶ್ ಶೆಟ್ಟಿ ನಡೆಸಿ ಕೊಟ್ಟರು. ಮನೀಷ್ ಶೆಟ್ಟಿ ಸಹಕರಿಸಿದರು.
ಯುವ ನಾಯಕ ಮಿಥುನ್ ರೈ ಈ ಸಂದರ್ಭದಲ್ಲಿ ಮಾತನಾಡಿ ತಂಡಗಳಿಗೆ ಶುಭ ಹಾರೈಸಿದರು. ಹಿರಿಯರಾದ ರಾಜಗೋಪಾಲ್ ರೈ ಅವರು ಮಾತನಾಡಿ, ಬಂಟ ಸಮುದಾಯದ ಸಂಘಟನೆ ಹಾಗೂ ಸಮಾಜ ಸೇವೆಗಳ ಮಾಹಿತಿ ನೀಡಿದರು. ಒಟ್ಟಾರೆ ಸಮಾಜದ ಹಿತಕ್ಕಾಗಿ, ಸೌಹಾರ್ದತೆಗಾಗಿ ಬಂಟ ಸಮುದಾಯ ಕೈಗೊಳ್ಳುವ ಸೇವಾ ಕಾರ್ಯಗಳನ್ನು ಅವರು ಉಲ್ಲೇಖಿಸಿ ಮುಖಂಡರನ್ನು ಅಭಿನಂದಿಸಿದರು.
ತಂಡಗಳ ವಿವರ:
ತುಳುನಾಡು ಟೈಗರ್ಸ್ (ಮಾಲೀಕರು: ರಕ್ಷಿತ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ), ಲೆಜೆಂಟ್ ಬಂಟ್ಸ್ (ಮಾಲೀಕರು: ಮಿಥುನ್ ರೈ, ಸಹ ಮಾಲೀಕರು: ಪ್ರವೀಣ್ ಚಂದ್ರ ಆಳ್ವ ಮತ್ತು ನಿತಿನ್ ಶೆಟ್ಟಿ), ಎಜೆ ರಾಯಲ್ಸ್ (ಮಾಲೀಕರು: ಪ್ರಶಾಂತ್ ಶೆಟ್ಟಿ), ಮೇಲಾಂಟ ಮಾವೆರಿಕ್ಸ್ (ಮಾಲೀಕರು: ಹರ್ಷ ಮೇಲಾಂಟ, ಸಹ ಮಾಲೀಕರು: ಆಶಿಶ್ ಶೆಟ್ಟಿ ಮತ್ತು ಧೀರಜ್ ಶೆಟ್ಟಿ), ಅಡ್ಯಾರ್ ರಾಯಲ್ ಕಿಂಗ್ (ಮಾಲೀಕರು: ಕಿಶನ್ ಶೆಟ್ಟಿ). ಕುಡ್ಲ ಸೂಪರ್ ಕಿಂಗ್ಸ್ (ಮಾಲೀಕರು: ಸಂಪತ್ ಶೆಟ್ಟಿ, ಧೀರಜ್ ಶೆಟ್ಟಿ), ವಿಕ್ರಂ ವಾರಿಯರ್ಸ್ (ಮಾಲೀಕರು: ಮಹೇಶ್ ವಿಕ್ರಮ್ ಹೆಗ್ಡೆ), ರಾಯಲ್ ಸುರಗಿರಿ ಬಂಟ್ಸ್ (ಮಾಲೀಕರು: ರವೀಂದ್ರನಾಥ್ ರೈ, ಸಹ ಮಾಲೀಕರು: ಸಂತೋಷ್ ಶೆಟ್ಟಿ, ಬಿಪಿನ್ ರೈ), ರಾಯಲ್ ಬಂಟ್ಸ್ ಸುರತ್ಕಲ್ (ಮಾಲೀಕರು: ಕಿರಣ್ ಕುಮಾರ್ ಶೆಟ್ಟಿ) ಹಾಗೂ ಕರಾವಳಿ ಚಾಲೆಂಜರ್ಸ್ (ಮಾಲೀಕರು: ಗಿರೀಶ್ ಶೆಟ್ಟಿ ಮತ್ತು ಶ್ರೀಶಲ್ ಆಳ್ವ).
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ