ಡಾ. ಎ. ರವೀಂದ್ರರವರ 'ಸದ್ಧರ್ಮಗೀತ' ಕೃತಿ ಲೋಕಾರ್ಪಣೆ

Upayuktha
0


ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ರಾಜ್ಯ ಸರ್ಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಡಾ. ಎ.ರವೀಂದ್ರರವರ ನೂತನ ಕೃತಿ 'ಸದ್ಧರ್ಮಗೀತ ' ನಾಲ್ಕು ಕಾವ್ಯಕಥನಗಳ ಗುಚ್ಛ ಲೋಕಾರ್ಪಣೆ ಸಮಾರಂಭವನ್ನು ನಗರದ ಇನ್ಫೆಂಟ್ರಿ ರಸ್ತೆಯ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಆಯೋಜಿಸಲಾಗಿತ್ತು.


ಸೆಂಟರ್ ಫಾರ್ ಸಸ್ಟೈನೆಬಲ್ ಡೆವಲಪ್ಮೆಂಟ್ ಮತ್ತು ಐಎಎಸ್ ಅಧಿಕಾರಿಗಳ ಸಂಘ ಸಹಯೋಗದಲ್ಲಿ ಏರ್ಪಡಿಸಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್ ಶಿವರಾಜ ವಿ ಪಾಟೀಲ ವಹಿಸಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತ ಕಾವ್ಯಕ್ಕೆ ಚುಂಬಕ ಶಕ್ತಿ ಉಂಟು. ಅದು ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೆ. ಭಾವಯತ್ರಿ ಪ್ರತಿಭೆವುಳ್ಳವರು ಕೂಡ ಕಾವ್ಯ ರಚನೆಗೆ ಕೈ ಹಾಕಿದವರುಂಟು, ಅಂತಹವರು ಕಾರಯಿತ್ರಿಯ ಕೈಯನ್ನು ಹಿಡಿಯುತ್ತಾರೆ. ಡಾ.ಎ ರವೀಂದ್ರರವರು ಈ ಸಾಲಿಗೆ ಸೇರಿದವರು . ಲೌಕಿಕ ಜ್ಞಾನ ಭಾಷೆ ಇಂಗ್ಲಿಷ್, ಮಾತೃಭಾಷೆ ತೆಲುಗು, ಹೃದಯದ ಭಾಷೆಯಾಗಿ ಕನ್ನಡದಲ್ಲಿ ಕಾವ್ಯ ಸಂವೇದನೆ ಇರುವ ವೈಚಾರಿಕ ಕಾವ್ಯ 'ಸದ್ಧರ್ಮ ಗೀತ' ನಮ್ಮ ಮುಂದೆ ಇಟ್ಟಿದ್ದಾರೆ ಎಂದು ತಿಳಿಸಿದರು.


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶರವರು ಕೃತಿ ಕುರಿತು ಇದು ಭಗವದ್ಗೀತೆಯಲ್ಲ; ಬದಲಾಗಿ ಜೀವನದ ಆಕೃತಿಯ ಧರ್ಮ ವಿಚಾರಕ್ಕೆ ಸಂಬಂಧಿಸಿದ್ದು. ಇಲ್ಲಿ ಬುದ್ಧ ಧರ್ಮ, ಬಸವ ಧರ್ಮ ಮತ್ತು ಅಂಬೇಡ್ಕರ್ ಧರ್ಮ ಒಂದಲ್ಲೊಂದು ತಳಕು ಹಾಕಿಕೊಂಡಿದೆ . ಸರಳವೂ ಅರ್ಥ ಗುಂಫನವು ಆದ ಗಪದ್ಯವೆಂಬ ಕಥನದಲ್ಲಿ ತಮ್ಮ ಕಾವ್ಯ ರಚನೆಯನ್ನು ಹೆಣೆದಿದ್ದಾರೆ  ಎಂದರು.


ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಸೆಂಟರ್ ಫಾರ್ ಸಸ್ಟೈನಬಲ್  ಡೆವಲಪ್ಮೆಂಟ್ ನ ವ್ಯವಸ್ಥಾಪಕ ನಿರ್ದೇಶಕ ಆರ್ ಶ್ರೀನಿವಾಸ್ ಮತ್ತು ಐಎಎಸ್ ಅಧಿಕಾರಿಗಳ ಸಂಘದ ವ್ಯವಸ್ಥಾಪಕ ಗಣೇಶ ಈ ಕಾರ್ಯಕ್ರಮ ಆಯೋಜಿಸಿದ್ದರು.  


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top