ಲಾಯಿಲ ಕರ್ನೋಡಿ ಶಾಲೆಯ ನವೀಕರಣಗೊಂಡ ಶಾಲಾ ಕೊಠಡಿಗಳ ಲೋಕಾರ್ಪಣೆ

Upayuktha
0

 



ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಇಂದಿರಾ ನಗರ ಬೆಂಗಳೂರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ ಉಜಿರೆ,ಹಳೇವಿದ್ಯಾರ್ಥಿ ಸಂಘ ಸ.ಹಿ.ಪ್ರಾ.ಶಾಲೆ ಕರ್ನೋಡಿ ಲಾಯಿಲ ಮತ್ತು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಬೆಂಗಳೂರಿನ ಕ್ಯಾನ್ ಫಿನ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಇವರ ಸಿ ಎಸ್ ಆರ್ ಫಂಡ್ ನಿಂದ ಲಾಯಿಲದ ಕರ್ನೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿನೂತನವಾಗಿ ನವೀಕರಣಗೊಂಡಿರುವ ಶಾಲಾ ಕೊಠಡಿಗಳನ್ನು ಲೋಕಾರ್ಪಣೆ ಮಾಡಲಾಯಿತು.


ಕ್ಯಾನ್ ಫಿನ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಶೋಶಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಮತ್ತು ಲಾಯಿಲ ಕರ್ನೊಡಿ ಶಾಲೆಯ ಆಡಳಿತ ಮಂಡಳಿ ಸಮ್ಮುಖದಲ್ಲಿ 30 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ವಿನೂತನವಾಗಿ ನವೀಕರಣಗೊಂಡ ಶಾಲಾ ಕೊಠಡಿಗೆ ಅಧಿಕೃತ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಜೋಶಿ, ಶಾಲೆಗಳಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಅತ್ಯಂತ ಅವಶ್ಯಕವಾಗಿವೆ. ಶಿಥಿಲಾವಸ್ಥೆಯಲ್ಲಿರುವ ಶಾಲ ಕೊಠಡಿಗಳು ಸುಸಜ್ಜಿತವಾಗಿ ಮರುನಿರ್ಮಾಣ ಅಥವಾ ವಿನೂತನವಾಗಿ ನವೀಕರಣಗೊಂಡಾಗ ಮಾತ್ರ ವಿದ್ಯಾರ್ಥಿಗಳಲ್ಲಿ ವಿದ್ಯಾಬ್ಯಾಸದ ಆಸಕ್ತಿ ಹೆಚ್ಚುತ್ತದೆ. ಜೊತೆಗೆ ಶಾಲಾ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಾರೆ. ಇಂತಹ ಅಭಿವೃದ್ಧಿದಾಯಕ ಬೆಳವಣಿಗೆಗಳಿಂದ ಶಾಲಾ ವಾತಾವರಣವು ಬದಲಾಗುತ್ತದೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ. ಶಾಲೆಯ ಮೇಲೆ ಆಡಳಿತ ಮಂಡಳಿ ಸೇರಿದಂತೆ ಪೋಷಕರಿಗೂ ವಿಶ್ವಾಸ ಬಲವಾಗುತ್ತದೆ ಎಂದರು.


ಔಪಾಚಾರಿಕ ಸಭೆಯ ವೇದಿಕೆಯಲ್ಲಿ ಮಾತನಾಡಿದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾ‌ರ್, ಬೆಂಗಳೂರಿನ ಕ್ಯಾಂಪಿಂಗ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ಸಿಎಸ್ಆರ್ ಫಂಡ್ ನಲ್ಲಿ ನೀಡಿದ ಧನ ಸಹಾಯವನ್ನು ಜವಾಬ್ದಾರಿಯಿಂದ ಸಂಪೂರ್ಣವಾಗಿ ಶಾಲೆಗೆ ವಿನಿಯೋಗಿಸಲಾಗಿದೆ. ಸಂಘ ಸಂಸ್ಥೆಗಳು ನೀಡಿರುವ ಹಣವನ್ನು ಕೂಡ ಪಾರದರ್ಶಕವಾಗಿಯೇ ಶಾಲೆಯ ಅಭಿವೃದ್ಧಿಗಾಗಿ ಸದುಪಯೋಗ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಮಕ್ಕಳ ಭವಿಷ್ಯ ಇದೆ. ಇವರ ಉನ್ನತಿಗಾಗಿ ನಾವೆಲ್ಲರೂ ಸದಾ ಕೈಜೋಡಿಸಬೇಕು ಎಂದರು.


ಇದೇ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ವತಿಯಿಂದ ಪ್ರಶಾಂತ್ ಜೋಶಿ, ರೋಟರಿ ಕ್ಲಬ್ ಅಧ್ಯಕ್ಷ ರೋ.ಪೂರನ್ ವರ್ಮಾ ಮತ್ತು ನಿಕಟಪೂರ್ವ ಅಧ್ಯಕ್ಷ ರೋ‌. ಅನಂತ್ ಭಟ್ ಮಚ್ಚಿಮಲೆ ಇವರನ್ನು  ಸನ್ಮಾನಿಸಲಾಯಿತು. ಗೌರವಾರ್ಪಣೆ ಕಾರ್ಯಕ್ರಮವನ್ನು ಹಿರಿಯ ವಕೀಲ, ಶಾಲಾ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ರೋ ಧನಂಜಯ್ ರಾವ್ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಲಾಯಿಲ ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು, ಪೋಷಕರು, ಬೆಳ್ತಂಗಡಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ರೊ. ಅಬೂಬಕರ್, ರೋ. ವಿದ್ಯಾ ಕುಮಾರ್ ಕಾಂಚೋಡು, ರೋ.ಶ್ರವಣ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಉಷಾ ನಿರೂಪಿಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ ವಂದಿಸಿದರು.


ಚಿತ್ತಾರದಿಂದ ಅಲಂಕೃತಗೊಂಡಿರುವ ಶಾಲಾ ಗೋಡೆಗಳು:

ವಿನೂತನ ಆಲೋಚನೆಯೊಂದಿಗೆ ಶಾಲ ಕೊಠಡಿಯನ್ನು ನವೀಕರಣಗೊಳಿಸಲಾಗಿದೆ. ಶಾಲಾ ಕೊಠಡಿಯ ಒಳಾಂಗಣ ಮತ್ತು ಹೊರಾಂಗಣದ ಗೋಡೆಯ ತುಂಬೆಲ್ಲಾ ಬಣ್ಣ ಬಣ್ಣದ ಚಿತ್ತಾರದಿಂದ ಕಂಗೊಳಿಸುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಲ್ಲಿ ವಿಜ್ಞಾನದ ಕುರಿತಾಗಿ ಕುತೂಹಲವನ್ನು ಹೆಚ್ಚಿಸುವ ಮತ್ತು ವೈಜ್ಞಾನಿಕತೆಯನ್ನು ಪರಿಚಯಿಸುವ ವರ್ಣಚಿತ್ರಗಳನ್ನು ಇಲ್ಲಿ ರಚಿಸಲಾಗಿದೆ. ಈ ಚಿತ್ರಗಳು ವಿದ್ಯಾರ್ಥಿಗಳಲ್ಲಿ ಭವಿಷ್ಯದ ಕನಸನ್ನು ಕಾಣಲು ಪ್ರೇರೇಪಿಸುತ್ತದೆ.


ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್  ಮುಂದಾಳತ್ವದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ 30 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಶಾಲಾ ಕೊಠಡಿ ನವೀಕರಣ ಬೆಳ್ತಂಗಡಿಯ ರೋಟರಿ ಸಂಸ್ಥೆ ಕಳೆದ ಹಲವು ದಶಕಗಳಿಂದ ಸಮಾಜಮುಖಿ ಮತ್ತು ಸಮಾಜವನ್ನು ಅಭಿವೃದ್ಧಿಪಡಿಸುವಂತಹ ಕಾರ್ಯಗಳಲ್ಲಿ ನಿರಂತರವಾಗಿದೆ. 


ಸಮಾಜವು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಶಸಕ್ತವಾಗಲು ಮೂಲಭೂತ ಸೌಕರ್ಯಗಳು ಅತ್ಯಂತ ಅವಶ್ಯಕ. ಇದನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ  ಹಲವು ಸರ್ಕಾರಿ ಶಾಲಾ ಕಾಲೇಜುಗಳಿಗೆ ಕಂಪ್ಯೂಟರ್, ಸ್ಕಾಲರ್ಶಿಪ್, ವಾಟರ್ ಫಿಲ್ಟರ್ ಇತ್ಯಾದಿ ಸವಲತ್ತುಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗೆ ಉಪಕರಣಗಳು ಮತ್ತು ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯಗಳನ್ನು ಸರ್ವರ ಸಹಕಾರದೊಂದಿಗೆ ಮಾಡುತ್ತಾ ಬಂದಿದೆ. ಇದರ ಭಾಗವಾಗಿ ವಿನೂತನವಾಗಿ ನವೀಕರಣಗೊಂಡಿರುವ ಕರ್ನೋಡಿ ಶಾಲೆಯ ಶಾಲ ಕೊಠಡಿಯೂ ಒಂದು. ಸಂಘ ಸಂಸ್ಥೆಗಳು ನೀಡುವ ಸಲತ್ತುಗಳನ್ನು ಸುಸಜ್ಜಿತವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

             

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top