ಮಂಗಳೂರು: ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮದ 'ಕೆರಿಯರ್ಸ್ ಆಫ್ ದಿ ಫ್ಯೂಚರ್' ಯೋಜನೆಯ ಮೊದಲ ಆವೃತ್ತಿಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ಘೋಷಿಸಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಯುವತಿಯರು ಮುಂದೆ ಬರುವಂತೆ ಮಾಡಲು ಅಮೆಜಾನ್ ಸಂಸ್ಥೆಯು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಥವಾ ಅದಕ್ಕೆ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿಗಳನ್ನು ಪಡೆಯುತ್ತಿರುವ 500 ಮಂದಿ ವಿದ್ಯಾರ್ಥಿನಿಯರಿಗೆ ಮೆರಿಟ್ ಆಧಾರದಲ್ಲಿ ನಾಲ್ಕು ವರ್ಷ ಅವಧಿಯಲ್ಲಿ ತಲಾ 2 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಟೆಕ್ ಕ್ಷೇತ್ರದಲ್ಲಿ ಇರುವ ಲಿಂಗ ಅಸಮಾನತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಈ ಯೋಜನೆಯು ಹಣಕಾಸು ಸಹಾಯ ಒದಗಿಸುವುದರ ಜೊತೆಗೆ ವಿದ್ಯಾರ್ಥಿನಿಯರಿಗೆ ಸಮಗ್ರ ಬೆಂಬಲವನ್ನು ಒದಗಿಸುತ್ತದೆ. ಇಲ್ಲಿಯವರೆಗೆ ಕಂಪನಿಯು ಭಾರತದಲ್ಲಿ 1700ಕ್ಕೂ ಹೆಚ್ಚು ಮೆರಿಟ್ ಆಧಾರಿತ ಇಂಟರ್ನ್‍ಶಿಪ್‍ಗಳನ್ನು ನೀಡಿದೆ ಎಂದು ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ಹೇಳಿದ್ದಾರೆ.
ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮದ ಮೂಲಕ ಈವರೆಗೆ 3 ಮಿಲಿಯನ್ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಭಾರತದ 8 ರಾಜ್ಯಗಳ 272 ಜಿಲ್ಲೆಗಳಲ್ಲಿ 20,000ಕ್ಕೂ ಹೆಚ್ಚು ಶಿಕ್ಷಕರಿಗೆ ಯಶಸ್ವಿಯಾಗಿ ತರಬೇತಿ ನೀಡಿದೆ.
ವಿದ್ಯಾರ್ಥಿಗಳಿಗೆ ನಿರ್ಣಾಯಕ ಕಲಿಕೆಯ ಅವಕಾಶಗಳನ್ನು ಒದಗಿಸಲು ಎಜುಕೇಷನಲ್ ಇನಿಶಿಯೇಟಿವ್ಸ್, ಪೀಪುಲ್, ದಿ ಇನ್ನೋವೇಶನ್ ಸ್ಟೋರಿ, ನವಗುರುಕುಲ ಮತ್ತು ಫೌಂಡೇಶನ್ ಫಾರ್ ಎಕ್ಸಲೆನ್ಸ್, ಆಶಾ ಫಾರ್ ಎಜುಕೇಶನ್, ಕ್ವೆಸ್ಟ್ ಅಲೈನ್ಸ್, ಲೀಡರ್‍ಶಿಪ್ ಫಾರ್ ಇಕ್ವಿಟಿ, ಲನಿರ್ಂಗ್ ಲಿಂಕ್ಸ್ ಫೌಂಡೇಶನ್, ಪೈಜಾಮ್ ಫೌಂಡೇಶನ್, ದಿ ಅಮೇರಿಕನ್ ಇಂಡಿಯಾ ಫೌಂಡೇಶನ್, ಕೋಡ್.ಆರ್ಗ್ ಸೇರಿದಂತೆ ಹಲವಾರು ಶಿಕ್ಷಣ-ಕೇಂದ್ರಿತ ಲಾಭರಹಿತ ಸಂಸ್ಥೆಗಳೊಂದಿಗೆ ಅಮೆಜಾನ್ ಪಾಲುದಾರಿಕೆಯನ್ನು ಮಾಡಿದೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ