ವೀರಸಾವರ್ಕರ್‌ ಹೋರಾಟದ ಹಾದಿ ಯುವಜನತೆಗೆ ಮಾದರಿಯಾಗಲಿ: ಡಾ. ಪ್ರಭಾಕರ ಭಟ್

Upayuktha
0

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ"ವಿಕಸಿತ ಭಾರತ- ವೀರ ಸಾವರ್ಕರ್" ಕಾರ್ಯಕ್ರಮ

ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವೀರ ಸಾವರ್ಕರ್‌ ಕುರಿತ ಕಿರು ನಾಟಕ ಪ್ರದರ್ಶನ



ಪುತ್ತೂರು: "ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಈ ದೇಶದ ಮೇಲೆ ಸಾಕಷ್ಟು ಪ್ರಹಾರಗಳು ನಡೆದಿರುವುದು ಗೋಚರಿಸುತ್ತದೆ. ಕಳೆದುಕೊಂಡ ಸ್ವಾತಂತ್ರ್ಯವನ್ನು ಪುನರ್‌ ಸ್ಥಾಪಿಸುವುದಕ್ಕಾಗಿ ಸಾಕಷ್ಟು ಮಂದಿ ವೀರ ಹೋರಾಟಗಾರರು ಈ ನೆಲದಲ್ಲಿ ಜನ್ಮವೆತ್ತಿ ಬಂದಿರುವುದು ತಿಳಿದಿದ್ದೇವೆ. ಅಂತವರಲ್ಲಿ ವೀರ ಸಾವರ್ಕರ್‌ ಅವರ ಹೋರಾಟ ಅತ್ಯಂತ ಗಮನಾರ್ಹವಾದದು. ಸ್ವಂತಕ್ಕಾಗಿ ಬದುಕನ್ನು ಕಟ್ಟಿಕೊಳ್ಳದೆ, ಸಂಪೂರ್ಣವಾಗಿ ದೇಶಕ್ಕಾಗಿ ಬದುಕಿದವರು ಸಾವರ್ಕರ್‌. ಬಲವಾದ ಧ್ಯೇಯ, ಚಿಂತನೆ, ತಾಯಿ ಭಾರತಿಗೋಸ್ಕರ ಬದುಕಬೇಕೆನ್ನುವ ಹಂಬಲ ಸಾವರ್ಕರ್‌ ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ದೇಶದಲ್ಲಿ ಚಾಲ್ತಿಯಲ್ಲಿದ್ದ ವಿದೇಶಿ ವಸ್ತುಗಳನ್ನು ದಹನ ಮಾಡಿ ಅದರ ಬೂದಿಯನ್ನು ಹಣೆಗೆ ಹಚ್ಚುವ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿ, ಎರಡೆರಡು ಬಾರಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ ಒಬ್ಬ ಕ್ರಾಂತಿಕಾರಿ ,ಒಂದು ಅದ್ಭುತ ಚೈತನ್ಯ, ಅಪ್ಪಟ ದೇಶಪ್ರೇಮಿ ಈ ದೇಶದಲ್ಲಿ ಯಾರಾದರೂ ಇದ್ದರೆ ಅದು ವೀರ ಸಾವರ್ಕರ್‌ ಮಾತ್ರ" ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್‌ಹೇಳಿದರು.


ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ "ವಿಕಸಿತ ಭಾರತ- ವೀರ ಸಾವರ್ಕರ್" ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಬಳಿಕ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವೀರ ಸಾವರ್ಕರ್‌ಕುರಿತ ಕಿರು ನಾಟಕವನ್ನು ಪ್ರದರ್ಶಿಸಿದರು. 


ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರಾದ ಶ್ರೀನಿವಾಸ ಪೈ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರುಗಳು, ವಿವೇಕಾನಂದ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್‌ನಿಟಿಲಾಪುರ, ಉಪಪ್ರಾಂಶುಪಾಲ ದೇವಿಚರಣ್‌ರೈ, ಉಪನ್ಯಾಸಕ - ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಕು. ಶೀತಲ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ,  ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ವಂದಿಸಿದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top