ರಾಷ್ಟ್ರದ ಹಿತಾಸಕ್ತಿ ಕಾಪಾಡುವುದೇ ವಿದೇಶಾಂಗ ನೀತಿಯ ಪ್ರಥಮ ಪ್ರಾಶಸ್ತ್ಯ: ಪ್ರೊ. ಶೆಟ್ಟಿ

Chandrashekhara Kulamarva
0


ಉಡುಪಿ: "ರಾಷ್ಟ್ರ ರಾಷ್ಟ್ರಗಳ ನಡುವಿನ ರಾಜಕೀಯ ಆಥಿ೯ಕ ಸಾಂಸ್ಕೃತಿಕ ಮಿಲಿಟರಿ ಮುಂತಾದ ಕ್ಷೇತ್ರಗಳಲ್ಲಿನ ಸಂಬಂಧಗಳನ್ನು ನಿರ್ಧರಿಸುವ ತಂತ್ರಗಾರಿಕೆಯೇ ವಿದೇಶಾಂಗ ನೀತಿ. ವಿದೇಶಾಂಗ ನೀತಿ ರೂಪಿಸುವುದು ಒಂದು ಕಲೆ ಮತ್ತು ತಂತ್ರಗಾರಿಕೆ. ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವುದು ಪ್ರತಿಯೊಂದು ರಾಷ್ಟದ ಮೊದಲ ಆದ್ಯತೆ" ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಹೇಳಿದರು.


ಉಡುಪಿ ಮತ್ತು ಉದ್ಯಾವರ ರೇೂಟರಿ ಕ್ಲಬ್‌ ನವರು ಜಂಟಿಯಾಗಿ ಉಡುಪಿ ಕಡಿಯಾಳಿಯ ರೇೂಟರಿ ಭವನದಲ್ಲಿ ಕಾರ್ಯಕ್ರಮದಲ್ಲಿ ಬದಲಾಗುತ್ತಿರುವ ವಿಶ್ವದ ವಿದ್ಯಾಮಾನಗಳು ಭಾರತದ ಮೇಲಾಗುವ ಪರಿಣಾಮಗಳು ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.


ವೇದಿಕೆಯಲ್ಲಿ ಉಡುಪಿ ರೇೂಟರಿ ಅಧ್ಯಕ್ಷ ರೇೂ. ಗುರುರಾಜ್  ಭಟ್ಟ, ಉದ್ಯಾವರ ರೇೂಟರಿ ಅಧ್ಯಕ್ಷ ರೇೂ. ಜೀವನ್ ಡಿ ಸೇೂಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ರೇೂಟರಿ ಕಾರ್ಯದಶಿ೯ ವೈಷ್ಣವಿ ಆಚಾರ್ಯ ವಂದಿಸಿದರು. ಅನಂತರದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top