ಮಂಗಳೂರು: ಹೊಸ ವರ್ಷಕ್ಕೆಂದು ತರಿಸಿದ್ದ 9 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಕ್ಕೆ, ಮೂವರ ಬಂಧನ

Chandrashekhara Kulamarva
0

ಮಂಗಳೂರು: 2025ರ ಹೊಸ ವರ್ಷ ಸ್ವಾಗತಿಸಲು ದಿನಗಣನೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ಹೊಸವರ್ಷಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 


ಅದರಲ್ಲೂ ಯುವ ಸಮೂಹವಂತೂ ನ್ಯೂ ಇಯರ್ ಸೆಲೆಬ್ರೆಷನ್​​ಗೆ ಭರ್ಜರಿ ಪ್ಲಾನಿಂಗ್​ ನಡೆಸಿದ್ದಾರೆ. ಈ ಮಧ್ಯೆ ಡ್ರಗ್ಸ್ ಮತ್ತು ಮಾದಕವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 24 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ. ಇದೀಗ ಬೆನ್ನಲ್ಲೇ ಮಂಗಳೂರಿನಲ್ಲಿ 9 ಲಕ್ಷ ರೂ ಮೌಲ್ಯದ ಮಾದಕವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ನಗರದಲ್ಲಿ ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ ಮೌಲ್ಯದ ಮಾದಕ ವಸ್ತುವನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಳೂರು ನದಿ ದಂಡೆಯಲ್ಲಿ ಡ್ರಗ್ಸ್ ಸ್ಕ್ವಾಡ್ ಹಾಗೂ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ದೇವರಾಜ್, ಮೊಹಮ್ಮದ್ ಫರ್ವೆಜ್ ಉಮರ್, ಶೇಖ್ ತಹೀಮ್ ಬಂಧಿತ ಆರೋಪಿಗಳು.


5 ಕೆಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7 ಗ್ರಾಂ ಕೋಕೆನ್, 17 ಗ್ರಾಂ ಎಂಡಿಎಂಎ ಪಿಲ್ಸ್, 100 ಗ್ರಾಂ ಚರಸ್, 8 ಗ್ರಾಂ ಹೈಡ್ರೋವಿಡ್ ಗಾಂಜಾ ಮತ್ತು 3 ಎಲ್​​ಎಸ್​ಡಿ ಸ್ಟ್ರಿಪ್ಸ್ ಸೇರಿದಂತೆ ಹರಿತವಾದ ಚಾಕು, ಮಾದಕ ವಸ್ತು ಸಾಗಾಟ ಮಾಡಲು ಉಪಯೋಗಿಸಿದ ಕಾರು ಮತ್ತು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top