ಪರುಷಮಣಿಗಳ ಸೃಷ್ಟಿಕರ್ತ ಸ್ವಾಮಿ ವಿವೇಕಾನಂದ: ಸಂದೀಪ್ ಎಸ್. ವಸಿಷ್ಠ

Upayuktha
0


ಪುತ್ತೂರು: ಭಾರತದ ಅಧ್ಯಯನ ಮಾಡಲು ವಿವೇಕಾನಂದರ ಅಧ್ಯಯನವನ್ನು ಮಾಡಬೇಕು. ಭಾರತದಲ್ಲಿ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿ ಹೊಸ ಅಧ್ಯಾಯವನ್ನು ಸೃಷ್ಟಿಸಿದರು. ಸನ್ಯಾಸತ್ವದ ಪರಿಕಲ್ಪನೆಯನ್ನೇ ಬದಲಾಯಿಸಿದವರು. ಜಗದ್ವಾಪಿಯಾಗಿ ಸ್ಪೂರ್ತಿ ತುಂಬಿ ಪರುಷಮಣಿಗಳನ್ನೇ ಸೃಷ್ಟಿಸಿದವರು ವಿವೇಕಾನಂದರು ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಹಿರಿಯ ವ್ಯವಸ್ಥಾಪಕ ಸಂದೀಪ್ ಎಸ್. ವಸಿಷ್ಠ ಹೇಳಿದರು.


ಪುತ್ತೂರಿನ ವಿವೇಕಾನಂದ ಕಾಲೇಜು, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯುಎಸಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ವಿವೇಕ ಸ್ಮೃತಿ ಉಪನ್ಯಾಸ ಮಾಲಿಕೆಯಲ್ಲಿ ‘ಸ್ವಾಮಿ ವಿವೇಕಾನಂದ- ಒಂದು ಚಿರಂತನ ಸ್ಪೂರ್ತಿ’ ವಿಷಯದಲ್ಲಿ ಉಪನ್ಯಾಸ ನೀಡಿದರು.


ಸ್ವಾಮಿ ವಿವೇಕಾನಂದರು ತಾಯಿ ಭಾರತಿಯ ವಿರಾಟ್ ಸ್ವರೂಪವನ್ನು ಪೂಜಿಸಲು ಕರೆ ನೀಡಿದವರು. ಸೇವೆ ಮತ್ತು ತ್ಯಾಗವನ್ನು ಜೀವನದಲ್ಲಿ ವ್ರತವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೃಷ್ಟಿ ಮಾತ್ರದಿಂದ ಶ್ರೇಷ್ಟತೆಯನ್ನು ಪ್ರತಿಷ್ಟಾಪನೆ ಮಾಡುವ ವ್ಯಕ್ತಿತ್ವ ವಿವೇಕಾನಂದರದ್ದು ಎಂದರು. ಇಷ್ಟು ಮಾತ್ರವಲ್ಲದೆ ಸಂಸ್ಕೃತದ ಪುಸ್ತಕಗಳನ್ನು ಪರಕೀಯರು ಓದಿ ಇಂಗ್ಲೀಷಿಗೆ ತರ್ಜುಮೆ ಮಾಡಿದ ಕೃತಿಗಳಲ್ಲಿರುವ ಸಾಲುಗಳನ್ನೇ ಆಧರಿಸಿ ನಮ್ಮ ಸಂಸ್ಕೃತಿ ಸರಿಯಾಗಿಲ್ಲ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ. ನಮ್ಮ ಸಂಸ್ಕೃತಿಯ ಆಳ ಅಗಲ ಯಾವ ಅಳತೆಗೂ ನಿಲುಕದ್ದು ಎನ್ನುವುದನ್ನು ಸ್ವಯಂ ಓದಿನ ಮೂಲಕ ಕಂಡುಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರೀಕ್ಷಾಂಗ ಕುಲಸಚಿವ ಡಾ. ಹೆಚ್.ಜಿ ಶ್ರೀಧರ್ ಮಾತನಾಡಿ ನಮ್ಮ ದೇಶದ ಆತ್ಮವಿರುವುದು ಆಧ್ಯಾತ್ಮದಲ್ಲಿ ಹೀಗಾಗಿ ಯಾರೋ ಪರಕೀಯರ ಮಾತುಗಳನ್ನೇ ನಂಬದೆ ನಮ್ಮ ಪುರಾಣಗಳು ಹೇಳುವ ಸತ್ಯವನ್ನು ನಾವು ಕಾಣಬೇಕು. ಕೃಷ್ಣನ ದ್ವಾರಕೆ ಇದ್ದದ್ದು ನಿಜ, ನದಿ ಸರಸ್ವತಿ ಹರಿಯುತ್ತಿದ್ದದ್ದು ಕೂಡ ನಿಜ. ಇದು ಅಧ್ಯಯನಗಳಿಂದ ಸತ್ಯ ಎನ್ನುವುದು ಸಾಬೀತಾಗಿದೆ. ಹೀಗಿರುವಾಗ ನಾವ್ಯಾಕೆ ಅದನ್ನು ನಂಬುವುದಿಲ್ಲ. ಎಲ್ಲ ಸಮಸ್ಯೆಗಳಿಗೂ ಓದಿನಲ್ಲಿ ಪರಿಹಾರವಿದೆ. ಆ ಓದು ವಿವೇಕಾನಂದರ ಜೀವನದಿಂದಲೇ ಆರಂಭವಾದರೆ ಮುಂದಿನ ಹಾದಿ ವಿಶಾಲವಾಗಿರುವುದರಲ್ಲಿ ಅನುಮಾನವೇ ಇಲ್ಲ ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್, ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪ್ರಥಮ ಜೆಎಂಸಿ ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಪ್ರಾರ್ಥಿಸಿ, ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿ ತೇಜಸ್ವಿ ಸ್ವಾಗತಿಸಿದರು. ದ್ವಿತೀಯ ಎಂಕಾಂ ವಿದ್ಯಾರ್ಥಿಗಳಾದ ವರುಣ್ ವಂದಿಸಿ, ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top