ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಎಂ. ಫಾರ್ಮ ಮತ್ತು ಫಾರ್ಮಾಡಿ ಶೇ.100 ಫಲಿತಾಂಶ

Upayuktha
0


ಮಂಗಳೂರು: ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೊಳಪಟ್ಟ ಸ್ನಾತಕೋತ್ತರ ಪದವಿ ಎಂ. ಫಾರ್ಮ ಮತ್ತು ಫಾರ್ಮಾಡಿ ನವೆಂಬರ್ 2024ರ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು ವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳಲ್ಲೂ ಶೇ.100 ಫಲಿತಾಂಶ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 


ದ್ವಿತೀಯ ವರ್ಷದ ಎಂ. ಫಾರ್ಮ ಫಾರ್ಮಸ್ಯುಟಿಕ್ಸ್ ವಿಭಾಗದಲ್ಲಿ ಕು. ಶೆಟ್ಟಿ ನಿರೀಕ್ಷಾ ವಿಜಯ್,  ಫಾರ್ಮಕಾಲಜಿ ವಿಭಾಗದಲ್ಲಿ ಕು. ಅಮೂಲ್ಯ, ಇಂಡಸ್ಟ್ರೀಯಲ್ ಫಾರ್ಮಸಿ ವಿಭಾಗದಲ್ಲಿ ಕು. ಸ್ನೇಹಲತಾ, ಕ್ವಾಲಿಟ್ ಅಶ್ಯುರೆನ್ ವಿಭಾಗದಲ್ಲಿ ಶಿಜಿನ್ ಪಿ.ಎಮ್ ಆಯಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಪ್ರಥಮ ವರ್ಷದ ಎಂ. ಫಾರ್ಮ ಫಾರ್ಮಸ್ಯುಟಿಕ್ಸ್ ವಿಭಾಗದಲ್ಲಿ ರಂಜನ್, ಫಾರ್ಮಕಾಲಜಿ ವಿಭಾಗದಲ್ಲಿ ಭವ್ಯಶ್ರೀ ನಾಯ್ಕ್ ಇಂಡಸ್ಟ್ರೀಯಲ್ ಫಾರ್ಮಸಿ ವಿಭಾಗದಲ್ಲಿ ಸ್ವಸ್ತಿಕಾ ಎಸ್, ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.  ಫಾರ್ಮಾಡಿಯಲ್ಲಿ ಜೋಸ್‌ಲಿನ್ ಡಯಾಸ್ ಮತ್ತು ಫಾರ್ಮಾ ಡಿ (ಪಿಬಿ)ಯಲ್ಲಿ ಶ್ಯೆನಿಯ ನಿಯೋಲಾ ಡಿಸೋಜ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 


ಆಡಳಿತ ಮಂಡಳಿ ಮತ್ತು ಕಾಲೇಜಿನ ಪ್ರಾಂಶುಪಾಲ ಹಾಗೂ ನಿರ್ದೇಶಕ ಡಾ.ಎ.ಆರ್.ಶಬರಾಯ ತಿಳಿಸಿ ವಿದ್ಯಾರ್ಥಿಗಳ ಯಶಸ್ಸನ್ನು ಅಭಿನಂದಿಸಿರುತ್ತಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top