ಸಣ್ಣ ಪತ್ರಿಕೆಗಳು ಮತ್ತು ಸಾಹಿತ್ಯ: ಕಲಾದರ್ಶನ ದತ್ತಿ ಉಪನ್ಯಾಸ

Upayuktha
0


 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕವು ಕನ್ನಡದ ಶ್ರೇಷ್ಟ ಪ್ರಕಾಶಕ, ಪತ್ರಕರ್ತ, ಸಾಹಿತಿ ಹಾಗೂ ಸಾಹಿತ್ಯೋಪಾಸಕ ವಿ.ಬಿ. ಹೊಸಮನೆ ಅವರು ಸ್ಥಾಪಿಸಿದ ಕಲಾದರ್ಶನ ದತ್ತಿ ಉಪನ್ಯಾಸವನ್ನು ಮಂಗಳೂರಿನ ವಾಮಂಜೂರಿನಲ್ಲಿರುವ ಸರಕಾರಿ ಪ್ರೌಢಶಾಲೆ, ಮೂಡುಶೆಡ್ಡೆಯಲ್ಲಿ ಆಯೋಜಿಸಿತ್ತು.


ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದತ್ತಿ ದಾನಿ ವಿದ್ವಾನ್ ವಿ.ಬಿ ಹೊಸಮನೆಯವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಕನ್ನಡನಾಡಿನ ಪ್ರಖ್ಯಾತ ಲೇಖಕಿ. ನಿವೃತ್ತ ಅಧ್ಯಾಪಕಿ ಬಿ.ಎಂ ರೋಹಿಣಿಯವರು "ಸಣ್ಣ ಪತ್ರಿಕೆಗಳು ಮತ್ತು ಸಾಹಿತ್ಯ" ಎನ್ನುವ ವಿಷಯದಲ್ಲಿ ಸುಲಲಿತವಾಗಿ ಎಳೆಯ ಹೃದಯಗಳಿಗೆ ಮನಮುಟ್ಟುವಂತೆ ಮಾತನಾಡಿ ದತ್ತಿ ಉಪನ್ಯಾಸವನ್ನು ನೀಡಿದರು.


ಕಾರ್ಯಕ್ರಮದಲ್ಲಿ ವಿ.ಬಿ. ಹೊಸಮನೆಯವರ ಸುಪುತ್ರ, ನಿವೃತ್ತ ಮುಖ್ಯೋಪಾಧ್ಯಾಯರಾದ ಭಾಸ್ಕರ ಹೊಸಮನೆಯವರು ತಮ್ಮ ತಂದೆಯವರು  ಬಡತನದ ಬದುಕಿನಲ್ಲೂ ಬೆಳೆಸಿಕೊಂಡು ಬಂದ ಸಾಹಿತ್ಯಪ್ರೇಮದ ಬಗ್ಗೆ ನೆನಪಿಸಿಕೊಂಡರು.


ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯರಾಮ ಕೊಟ್ಟಾರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಬಿ. ಯವರು ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ರೇವಣಕರರು ಸಭಾಧ್ಯಕ್ಷತೆ ವಹಿಸಿದ್ದರು. ಘಟಕದ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು. ಗೌರವ ಕಾರ್ಯದರ್ಶಿ ಗಣೇಶ ಪ್ರಸಾದಜೀ ಯವರು ನಿರೂಪಿಸಿದರು.


ಖ್ಯಾತ ಸಾಹಿತಿ ಹಾಗೂ ಪರಿಷತ್ತಿನ ಪದಾಧಿಕಾರಿ ಬೆನೆಟ್ ಅಮ್ಮನ್ನರವರ ಸಮರ್ಥ ಸಂಯೋಜನೆಯಲ್ಲಿ ಕಾರ್ಯಕ್ರಮವು ರೂಪುಗೊಂಡಿತ್ತು. ಪರಿಷತ್ತಿನ ಬಿ. ಕೃಷ್ಣಪ್ಪ ನಾಯಕ್, ನಿಜಗುಣ ದೊಡ್ಡಮನಿ, ಶಾಲಾ ಅಧ್ಯಾಪಕ ವೃಂದದವರು, ಹಾಗೂ ಸುಮಾರು 60 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top