ಕಾಸರಗೋಡು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.27, 28, 29 ರಂದು ನಡೆಯಲಿರುವ 3ನೇ ವಿಶ್ವ ಹವ್ಯಕ ಸಮ್ಮೇಳನದ ಸಂದರ್ಭದಲ್ಲಿ ಪ್ರದಾನ ಮಾಡಲಾಗುವ ಹವ್ಯಕ ವಿದ್ಯಾ ರತ್ನ' ಪ್ರಶಸ್ತಿಗೆ ಕಾಸರಗೋಡಿನ ಮಕ್ಕಳ ತಜ್ಞ ವೈದ್ಯೆ ಡಾ. ಚೈತ್ರಾ. ಪಿ. ಆಯ್ಕೆಯಾಗಿದ್ದಾರೆ.
ಡಾ. ಚೈತ್ರಾ ಪಿ. (MBBS, M.D. Pediatric Gold medalist, Fellow in Neonatology) ಇವರು ಕಾಸರಗೋಡಿನ ಪ್ರಖ್ಯಾತ ಹೃದಯ ತಜ್ಞ ಡಾ. ಭರತೇಶ ಯು.ಜಿ ಅವರ ಧರ್ಮಪತ್ನಿ ಹಾಗೂ ಉಪ್ಪಿನಂಗಡಿಯ ಅಬಾರಾಜೆ ಗೋವಿಂದ ಭಟ್ ಮತ್ತು ಸೀತಾರತ್ನ ಅವರ ಸೊಸೆ.
ದೇಲಂಪಾಡಿಯಲ್ಲಿರುವ ಪಡಾರು ತಿರುಮಲೇಶ್ವರ ಭಟ್ ಮತ್ತು ಜಯಶ್ರೀಯವರ ಪುತ್ರಿ. ಈಗ ಅವರು ಕಾಸರಗೋಡಿನ ವಿನ್ ಟಚ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ