ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ “ಯುವ ಬರಹಗಾರರಿಗೆ ಕಾವ್ಯಕಮ್ಮಟ” ವನ್ನು ಶನಿವಾರ (ಡಿ.14) ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ. ರಜನಿ ಎ ಪೈ ಅವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊಫೆಸರ್ ಡಾ. ಸಬಿತಾ ಬನ್ನಾಡಿ, ಪ್ರೊಫೆಸರ್ ಡಾ. ಭಾರತಿ ದೇವಿ ಪಿ ರವರು ಭಾಗವಹಿಸಿ ಕಾವ್ಯವು ವ್ಯಕ್ತಪಡಿಸುವ ಅನುಭವ ಸ್ವಂತದ ಅನುಭವವೇ ಆಗಿರಬೇಕಿಲ್ಲ. ಇನ್ನೊಬ್ಬರ ಅನುಭವವನ್ನು ನಮ್ಮ ಅನುಭವವಾಗಿಸಿಕೊಳ್ಳವುದೇ ಕಾವ್ಯದ ಸಾಧನೆ ಆಗಿರುತ್ತದೆ. ಆದ್ದರಿಂದ ಅನ್ಯಾಯ, ಶೋಷಣೆ ಇವುಗಳು ಕೇವಲ ನಿರ್ದಿಷ್ಟ ವರ್ಗ, ಜಾತಿ ಅಥವಾ ಲಿಂಗತ್ವದ ಅಭಿವ್ಯಕ್ತಿ ಆಗಿರುವುದಿಲ್ಲ. ಅವು ಎಲ್ಲಾ ಮನುಷ್ಯರಿಗೆ ಸಾಮಾನ್ಯವಾಗಿರುವ ಅಂಶಗಳೆಂದು ನೋಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ರಾಜೇಂದ್ರ ಚೆನ್ನಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾವ್ಯ ಬರೆಯುವುದು ಮತ್ತು ಓದುವುದು ನಿಂತರೆ ಬರೀ ಯುದ್ಧಗಳನ್ನು ನೋಡುವ, ಓದುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿ ಕಾವ್ಯದ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲೆ ಡಾ. ಸಂಧ್ಯಾ ಕಾವೇರಿಯವರು, ಕಾವ್ಯ ಹೇಗೆ ಒಂದು ವಿಶೇಷ ಶಕ್ತಿಯಾಗಿ ನಮ್ಮನ್ನ ಒಳಗೊಳ್ಳುತ್ತದೆ. ಕಾವ್ಯ ಹೇಗೆ ಸಮಾಜವನ್ನು ಕಟ್ಟಬಲ್ಲದು ಎಂಬುದನ್ನು ವಿವರಿಸಿದರು.
ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊಫೆಸರ್ ರಾಮಚಂದ್ರ ಬಾಳಿಗ ಅವರು ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಹಾಯಕ ಪ್ರಾಧ್ಯಾಪಕ ಗಣೇಶ್ ಪ್ರಸಾದ್ ಇವರು ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ರೇಷ್ಮಾ ಅವರು ವಂದಿಸಿದರು. ಕುಮಾರಿ ಸಂಧ್ಯಾ ಅಂತಿಮ ಬಿ ಎ ಅವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ