ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಮೋಟಾರು ವಾಹನ ವಿಭಾಗವು, ಒಂದು ದಿನದ, ಮುಕ್ತ ವಾಹನ ಪ್ರದರ್ಶನ “ಆಟೋಎಕ್ಸ್‌ಪೋ- 2024” ದ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ಡಿ.14 ರಂದು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಉದ್ಘಾಟಿಸಲು ಮುಖ್ಯ ಅತಿಥಿಗಳಾಗಿ ವೃತ್ತಿಪರ ಮಾಧ್ಯಮಗಾರ ಮತ್ತುಆಟೋ ಮೊಬೈಲ್ ಪತ್ರಕರ್ತ ಗಿರೀಶ ಶೇಟ್ ಅವರು ಆಗಮಿಸುವರು.
ಗೌರವಾನ್ವಿತ ಡಾ. ಸಿಎ.ಎ. ರಾಘವೇಂದ್ರರಾವ್, ಕುಲಾಧಿಪತಿ, ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಅಧ್ಯಕ್ಷ, ಎ. ಶಾಮರಾವ್ ಪೌಂಡೇಶನ್, ಮಂಗಳೂರು, ಇವರು ಸಮಾರಂಭದ ಅಧ್ಯಕ್ಷರಾಗಿ ಆಗಮಿಸುವರು. ಗೌರವಾನ್ವಿತ ಡಾ.ಎ.ಶ್ರೀನಿವಾಸ್‌ರಾವ್, ಸಹಕುಲಾಧಿಪತಿ, ಶ್ರೀನಿವಾಸ ವಿಶ್ವವಿದ್ಯಾಲಯ, ಉಪಾಧ್ಯಕ್ಷ, ಎ. ಶಾಮರಾವ್ ಫೌಂಡೇಶನ್ ಮಂಳೂರು ಅವರು ಗೌರವ ಅತಿಥಿಗಳಾಗಿ ಆಗಮಿಸುವರು. 50ಕ್ಕೂ ಹೆಚ್ಚು ನವೀನ, ಪಾರಂಪರಿಕ ಕಾರುಗಳು, ಜೀಪ್‌ಗಳು, ಸೂಪರ್ ಬೈಕ್‌ಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಈ ಸಮಾರಂಭವು ಬೆಳಿಗ್ಗೆ10.30ಗೆ ಆರಂಭಗೊಳ್ಳುವುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ