ನಿಟ್ಟೆ ಕಾಲೇಜು ಎನ್ನೆಸ್ಸೆಸ್ ವಾರ್ಷಿಕ ಶಿಬಿರ 24ರಿಂದ 30ರ ವರೆಗೆ

Upayuktha
0


ಕಾರ್ಕಳ: ಡಿ.24ರಿಂದ 30 ರ ವರೆಗೆ ಡಾ|ಎನ್‌.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜು ನಿಟ್ಟೆಯ 33ನೆಯ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರವು ಶ್ರೀ ಲಕ್ಷ್ಮೀ ಜನಾರ್ದನ ಪ್ರಾಥಮಿಕ ಶಾಲೆ ಎಳ್ಳಾರೆಯಲ್ಲಿ ನಡೆಯಲಿದೆ.


ಅದರ ಪ್ರಯುಕ್ತ ಡಿ.26ರಂದು ಗುರುವಾರ ಮಂಗಳೂರಿನ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯ, ನಿಟ್ಟೆ ಗಾಜ್ರಿಯಾ ಆಸ್ಪತ್ರೆ ಕಾರ್ಕಳ, ಪ್ರಸಾದ್ ನೇತ್ರಾಲಯ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿ, NCD ಘಟಕ- ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಲಿದೆ.


ಈ ಎಲ್ಲ ಆಸ್ಪತ್ರೆಗಳ ಮತ್ತು ಊರಿನ ಹಲವಾರು ಸಂಘಟನೆಗಳ ಸಂಯೋಜನೆಯಲ್ಲಿ ಉಚಿತ ನೇತ್ರ, ಆರೋಗ್ಯ, ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ. ಹಲ್ಲು ತಪಾಸಣೆ (checking), ಹಲ್ಲು ಸ್ವಚ್ಛಗೊಳಿಸುವುದು (cleaning), ಹಲ್ಲು ಫಿಲ್ಲಿಂಗ್ (filling), ಹಲ್ಲು ತೆಗೆಯುವುದು (extracting), ಕಣ್ಣಿನ ತಪಾಸಣೆ ಮತ್ತು ಸೂಕ್ತ ಮಾರ್ಗದರ್ಶನ ಹಾಗೂ ಬಿಪಿ, ಮಧುಮೇಹ, ಎದೆನೋವು, ಉಬ್ಬಸ, ಮೈ ಕೈ ನೋವು, ನಿಶ್ಶಕ್ತಿ, ಕೆಮ್ಮು, ಶೀತ, ಜ್ವರ ಇತ್ಯಾದಿ ಸಾಮಾನ್ಯ ಅರೋಗ್ಯ ತಪಾಸಣೆ ನಡೆಯಲಿರುವುದು.


ಎನ್‌ಎಸ್‌ಎಸ್‌ ಶಿಬಿರದಲ್ಲಿ ಡಿ.27ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ, ಅಗ್ನಿ ಸುರಕ್ಷತೆ ಕುರಿತು ಕಾರ್ಯಾಗಾರ; 29ರಂದು ಭಾನುವಾರ "ಕೆಸರ್ ಡೊಂಜಿ ದಿನ"; ಪ್ರತಿದಿನ ಸಂಜೆ 6:45 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 30ರಂದು ಸೋಮವಾರ ಸಮಾರೋಪ ಸಮಾರಂಭ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top