ಪಾಣೆಮಂಗಳೂರು: ಓಂ ಶ್ರೀ ಗೆಳೆಯರ ಬಳಗ ಮತ್ತುಓಂಶ್ರೀ ಮಹಿಳಾ ಮಂಡಳಿ, ಶ್ರೀದೇವಿ ಯುವಕ ಮಂಡಲ, MYC ಮರ್ದೋಳಿ, ನವಜೀವನ ಗೇಮ್ಸ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನರಿಕೊಂಬು ಇದರ ಜಂಟಿ ಆಶ್ರಯದಲ್ಲಿ ಡಿ.1ರಂದು ಬೆಳಿಗ್ಗೆ 7:00 ಗಂಟೆಯಿಂದ ಶ್ರೀದೇವಿ ಯುವಕ ಮಂಡಲ ಕಾಪಿಕಾಡ್‌ನಿಂದ SVS ಶಾಲೆ ಪಾಣೆಮಂಗಳೂರು ತನಕ ರಸ್ತೆ ಬದಿ ಸ್ವಚ್ಛತೆ ಮಾಡಲಾಯಿತು.
ಓಂಶ್ರೀ ಗೆಳೆಯರ ಬಳಗದವರಿಂದ ಚಾ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಸ್ವಚ್ಛತಾ ಕಾರ್ಯಕ್ರಮದ ಕೊನೆಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷರು ಕಿರಣ್ ಆಟ್ಲೂರು ಮಾತನಾಡಿ, ನಮ್ಮ ಹತ್ತಿರದ ಸಂಘ ಸಂಸ್ಥೆಗಳು ಒಟ್ಟು ಸೇರಿ ನಮ್ಮ ಓಂಶ್ರೀ ಗೆಳೆಯರ ಬಳಗ ಮುಂದಾಳತ್ವದಲ್ಲಿ ಈ ವರ್ಷ ಈ ಕಾರ್ಯಕ್ರಮ ನಡೆಯಿತು. ಮುಂದಿನ ವರ್ಷ ನವಜೀವನದ ಮುಂದಾಳತ್ವದಲ್ಲಿ ಈ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಅದಕ್ಕೆ ತಮ್ಮೆಲ್ಲರ ಸಹಕರ ಅಗತ್ಯ ಎಂದರು, ಸ್ವಚ್ಛತೆಯ ಜೊತೆಗೆ ಹತ್ತಿರದ ಸಂಫ ಸಂಸ್ಥೆಗಳು ಒಟ್ಟುಗುಡಿಸುವ ಒಂದು ಪ್ರಯತ್ನ ಆಯಿತು ಎಂದರು.
ವೇದಿಕೆಯಲ್ಲಿ ಉದ್ಯಮಿ ಉಮೇಶ್ ನೆಲ್ಲಿಗುಡ್ಡೆ, ಶ್ರೀದೇವಿ ಯುವಕ ಮಂಡಲ ನಾಯಿಲ ಕಾಪಿಕಾಡ್ ನ ಅಧ್ಯಕ್ಷರು ಲೋಕೇಶ್ ಬೋರುಗುಡ್ಡೆ, ನವಜೀವನ ಗೇಮ್ಸ್ ಕ್ಲಬ್ ನ ಅಧ್ಯಕ್ಷರು ಸುಧೀರ್ ವಿದ್ಯಾನಗರ, ನವಜೀವನ ಹನುಮಾನ್ ಮಂದಿರದ ಅಧ್ಯಕ್ಷರು ಶರತ್ ವಿದ್ಯಾನಗರ, MYC ಮರ್ದೋಳಿಯ ಚರಣ್ ಕುಮಾರ್, ಓಂಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ನಳಿನಿ ಶುಭಕರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ