ಬೆಂಗಳೂರು: ನಗರದ ಬಸವನಗುಡಿಯ ನ್ಯಾಷನಲ್ ಡಿಗ್ರಿ ಕಾಲೇಜಿನ ಪದ್ಮಭೂಷಣ ಡಾ|| ಎಚ್. ನರಸಿಂಹಯ್ಯ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಡಿಸೆಂಬರ್ 8, ಭಾನುವಾರ ಸಂಜೆ 4-30ಕ್ಕೆ ವಿಕಸನ ಟ್ರಸ್ಟ್ ಉದ್ಘಾಟನಾ ಸಮಾರಂಭ ಮತ್ತು ನಿಶ್ಶಬ್ದ ಭಾಗ-2 ಗೀತೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ 'ಗಾನಕಲಾಭೂಷಣ' ಡಾ|| ಆರ್. ಕೆ. ಪದ್ಮನಾಭ, ಖ್ಯಾತ ಮ್ಯಾಂಡೋಲಿನ್ ಕಲಾವಿದರೂ, ಸಂಗೀತ ನಿರ್ದೇಶಕರೂ ಆದ ಎನ್.ಎಸ್. ಪ್ರಸಾದ್ ಮತ್ತು ಅದಮ್ಯ ಚೇತನದ ಅಧ್ಯಕ್ಷೆ ಡಾ|| ತೇಜಸ್ವಿನಿ ಅನಂತಕುಮಾರ್ ಆಗಮಿಸುವರು.
ಭಕ್ತಿ ಭಾವ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಕಸನ ಟ್ರಸ್ಟ್ ಮತ್ತು ಗುರುಕುಲಂ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ವಂದ್ಯಂ-ಪ್ರಭಾತ್ ಅಕಾಡೆಮಿ ಆಫ್ ಡ್ಯಾನ್ಸ್ ನ ಕಲಾವಿದರಿಂದ ನೃತ್ಯ ಪ್ರದರ್ಶನದ ನಂತರ ಸಭಾ ಕಾರ್ಯಕ್ರಮ ಮತ್ತು ನಿಶ್ಶಬ್ದ ಭಾಗ-2 ಗೀತೆ ಬಿಡುಗಡೆ, ಅಪರ್ಣ ನರೇಂದ್ರ ಅವರಿಂದ ಸಂಗೀತ ಕಾರ್ಯಕ್ರಮವಿದೆ. ವಾದ್ಯ ಸಹಕಾರದಲ್ಲಿ ಆರ್. ಲೋಕೇಶ್ (ತಬಲಾ), ವೀರೇಂದ್ರ ಪ್ರಸಾದ್ (ಮ್ಯಾಂಡೋಲಿನ್), ವಿ. ಯಶೋಧರ್ (ರಿದಂ ಪ್ಯಾಡ್), ದುಶ್ಯಂತ್ (ಕೀ-ಬೋರ್ಡ್) ಮತ್ತು ವಸಂತ್ ಕುಮಾರ್ (ಕೊಳಲು) ಸಾಥ್ ನೀಡಲಿದ್ದಾರೆ.
ಈ ಕಾರ್ಯಕ್ರಮದ ನಿರೂಪಣೆಯನ್ನು ಅರ್ಚನಾ ಹೆಗಡೆ ನಡೆಸಿಕೊಡಲಿದ್ದು, ಈ ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಂಗೀತ ಗುರುಗಳೂ ಟ್ರಸ್ಟಿನ ಸಂಸ್ಥಾಪಕರೂ ಆದ ಅಪರ್ಣ ನರೇಂದ್ರ ಅವರು ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ