ಮಾಹಿತಿ ಮತ್ತು ತಜ್ಞತೆ ಪಡೆಯುವುದಕ್ಕೆ ಸ್ಪರ್ಧೆಗಳು ಅವಶ್ಯಕ: ಸುರೇಶ ಶೆಟ್ಟಿ

Upayuktha
0

 ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಅರೇಮ್ಯ 2024 ಸ್ಪರ್ಧೆ ಉದ್ಘಾಟನೆ



ಪುತ್ತೂರು: ಜಾಹೀರಾತಿನಂತಹ ಕ್ಷೇತ್ರ ಇಂದು ಕೋಟ್ಯಂತರ ರೂಪಾಯಿ ವಹಿವಾಟುಗಳ ಕೇಂದ್ರವೆನಿಸಿದೆ. ಆದ್ದರಿಂದ ಇಂತಹ ರಂಗಗಳ ಬಗೆಗೆ ಯುವಮನಸ್ಸುಗಳಿಗೆ ಮಾಹಿತಿ, ತಜ್ಞತೆ ಒದಗಿಸಿಕೊಡಬೇಕಾದ ಅವಶ್ಯಕತೆಗಳಿವೆ. ಈ ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಆಯೋಜಿಸುವ ಜಾಹೀರಾತು, ಉತ್ಪನ್ನ ಪ್ರಸ್ತುತಿಯಂತಹ ಸ್ಪರ್ಧೆಗಳು ಪ್ರಾಮುಖ್ಯತೆ ಪಡೆಯುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ. ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಜಿಲ್ಲಾಮಟ್ಟದ ಸೃಜನಶೀಲ ಸ್ಪರ್ಧೆ ಅರೇಮ್ಯ ೨೦೨೪ ಅನ್ನು ಉದ್ಘಾಟಿಸಿ ಮಾತನಾಡಿದರು.


ಸ್ಪರ್ಧೆಗಳು ನಮ್ಮೊಳಗಿನ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿ. ಗೆದ್ದವರಿಗಷ್ಟೇ ಸ್ಪರ್ಧೆ ಸೀಮಿತವಲ್ಲ. ಗೆಲ್ಲಲಾಗದವರಿಗೂ ಒಳ್ಳೆಯ ಅನುಭವವನ್ನು ಕಲ್ಪಿಸಿಕೊಡುತ್ತದೆ. ನಮ್ಮ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಸ್ಪರ್ಧೆಗಳಿಂದ ದೊರಕುವ ಅನುಭವ ಸಹಕಾರಿಯೆನಿಸುತ್ತದೆ. ಆದ್ದರಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಅವುಗಳ ಸದುಪಯೋಗಪಡಿಸುವ ನೆಲೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.


ಪ್ರಸ್ತಾವನೆಗೈದ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಆಧುನಿಕ ದಿನಮಾನಗಳಲ್ಲಿ ಶಿಕ್ಷಣ ವೇಗವನ್ನು ಪಡೆದುಕೊಂಡಿದೆ. ಅನೇಕಾನೇಕ ಒತ್ತಡಗಳನ್ನು ಎದುರಿಸುತ್ತಾ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯನಿರ್ವಹಿಸುವ ಅಗತ್ಯವಿದೆ. ಆದರೆ ಇವೆಲ್ಲದರ ಮಧ್ಯೆ ಶಿಕ್ಷಣದ ಮೂಲಭೂತ ಉದ್ದೇಶವಾದ ವ್ಯಕ್ತಿತ್ವ ನಿರ್ಮಾದ ಬಗೆಗೂ ಶಿಕ್ಷಣ ವ್ಯವಸ್ಥೆಯಲ್ಲಿರುವವರು ಕಾರ್ಯತತ್ಪರರಾಗಬೇಕು. ಈ ಹಿನ್ನೆಲೆಯಲ್ಲಿ ಸ್ಪರ್ಧೆಗಳು ವಿದ್ಯಾರ್ಥಿ ಜೀವನದ ಅವಶ್ಯ ವಿಚಾರಗಳೆನಿಸುತ್ತವೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಸ್ಪರ್ಧೆಯ ಸಂದರ್ಭದಲ್ಲಿ ನಮ್ಮ ಕಣ್ಣ ಮುಂದೆ ನಮ್ಮ ಗುರಿ ಇರುತ್ತದೆ. ಎದುರಿಗೆ ವಿಜ್ರಂಭಿಸುತ್ತಿರುವ ಬಹುಮಾನದ ಟ್ರೋಫಿಗಳನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ನಾವು ಸರ್ವ ಸನ್ನದ್ಧರಾಗಿ ಮುಂದುವರಿಯುತ್ತೇವೆ. ಆದರೆ ಬದುಕಿನ ಗುರಿಯೆಡೆಗೂ ನಾವು ಅಷ್ಟೇ ಆಸಕ್ತಿಯಿಂದ ಮುಂದಡಿ ಇಡಬೇಕು. ಹಾಗೆ ಭವಿಷ್ಯದ ಗುರಿಗಳನ್ನು ನಿರ್ಧರಿಸಬೇಕೆಂಬ ಸಂದೇಶವನ್ನು ಸ್ಪರ್ಧೆಗಳು ನೀಡುತ್ತವೆ ಎಂದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ., ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಶ್ರೀದೇವಿ ಸ್ವಾಗತಿಸಿ, ವಿದ್ಯಾರ್ಥಿನಿ ಅನ್ಸಿಕಾ ವಂದಿಸಿದರು. ವಿದ್ಯಾರ್ಥಿನಿ ಅನನ್ಯಾ ವಿ. ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top