.ಡಿ.7ರಂದು ಕೊಸೆಸಾಂವ್ ಮಾತೆಯ ಹಬ್ಬ ನಡೆಯಲಿದ್ದು, ಸಂಜೆ 5ಕ್ಕೆ ಜಪಮಾಲೆ, 5.30ಕ್ಕೆ ಪೆರ್ಮನ್ನೂರು ಚರ್ಚಿನ ಸಹಾಯಕ ಧರ್ಮಗುರು ಫಾ. ಜಾನ್ಸನ್ ಪಿರೇರಾ ಅವರಿಂದ ಕೃತಜ್ಞತಾ ಪೂಜೆ ಹಾಗೂ ನೊವೆನಾ ನೆರವೇರಿಸಲಿದ್ದಾರೆ. ಹಬ್ಬದ ಪೂರ್ವಭಾವಿಯಾಗಿ ನವದಿನಗಳ ನೊವೆನಾಗಳು ನಡೆದಿದ್ದು ಸಾವಿರಾರು ಭಕ್ತರು ಪ್ರಾರ್ಥನವಿಧಿಯಲ್ಲಿ ಭಾಗವಹಿಸಿದರು ಎಂದು ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಅವರು ತಿಳಿಸಿದ್ದಾರೆ.
ಪೊಂಪೈ ಮಾತೆ ಎಂದರೆ ಯಾರು?
ಪ್ರಭು ಯೇಸುವಿನ ತಾಯಿ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯಲಾಗುತ್ತದೆ.
ಇಟಲಿಯ ಪೊಂಪೈ ಕಣಿವೆ ಪ್ರದೇಶದಲ್ಲಿ ಜನರು ದೈವಭಕ್ತಿಯಾಗಲಿ, ಪರಸ್ಪರ ಕಾಳಜಿಯಾಗಲೀ ಇಲ್ಲದೆ ಅನಾಗರಿಕರಂತೆ ಬಾಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರ ಮನಃ ಪರಿವರ್ತನೆಗಾಗಿ 1872ರಲ್ಲಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಳು ದರ್ಶನವಿತ್ತು ಪ್ರಾರ್ಥಿಸಲು ಕರೆ ನೀಡಿದರು. ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನಃ ಪರಿವರ್ತನೆಯಾಯಿತು ಮತ್ತು ಊರಿಗೆ- ಊರೇ ಸರಿದಾರಿಗೆ ಬಂತು. ಪೊಂಪೈ ನಗರದಲ್ಲಿ ಮಾತೆ ಮರಿಯಳ ದರ್ಶನವಾಗಿರುವುದರಿಂದ ಆಕೆಯನ್ನು ಪೊಂಪೈ ಮಾತೆಯೆಂಬುದಾಗಿ ಕರೆಯುತ್ತಾರೆ. ಪೊಂಪೈ ಮಾತೆಯ ಭಕ್ತಿ ಪ್ರಪಂಚದಾದ್ಯಂತ ಹಬ್ಬಿತು. ಉರ್ವ ಚರ್ಚ್‍ನಲ್ಲಿ ಪೊಂಪೈ ಮಾತೆಗಾಗಿ 1895ರಲ್ಲಿ ಒಂದು ಪೀಠವನ್ನು ಸ್ಥಾಪಿಸುವುದರ ಮೂಲಕ ಪೊಂಪೈ ಮಾತೆಯ ಭಕ್ತಿ ಆರಂಭವಾಯಿತು. 1995 ರಲ್ಲಿ ಈಗಿರುವ ಪುಣ್ಯಕ್ಶೇತ್ರದ ಕಟ್ಟಡವನ್ನು ಕಟ್ಟಲಾಯಿತು. ಈ ಪುಣ್ಯಕ್ಷೇತ್ರಕ್ಕೆ ವರ್ಷವಿಡೀ ಭಕ್ತಾದಿಗಳು ಭೇಟಿ ನೀಡಲು ಬರುತ್ತಾರೆ. ತಮ್ಮ ನಾನಾ ಕೋರಿಕೆಗಳಿಗೋಸ್ಕರ ಪ್ರಾರ್ಥಿಸುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ