ಸಂತಸ ಹಾಗೂ ಉಲ್ಲಾಸದ ಕ್ರಿಸ್ಮಸ್

Upayuktha
0


ಡಿಸೆಂಬರ್ 25 ಬಂತೆಂದರೆ ಕ್ರಿಶ್ಚಿಯನ್ ಬಂಧುಗಳಿಗೆ ವರ್ಣಿಸಲಾಗದಷ್ಟು ಸಂತಸ-ಸಂಭ್ರಮ. ಕುಟುಂಬದವರೆಲ್ಲಾ, ಕ್ರಿಸ್ಮಸ್ ಟ್ರೀ ತುಂಬಾ ವರ್ಣರಂಜಿತ ದೀಪಗಳನ್ನು ಬೆಳಗಿಸಿ, ಕ್ರಿಸ್ತನ ಗುಣಗಾನ ಮಾಡುತ್ತಾ, ಚರ್ಚ್‌ಗಳಿಗೆ ಹೋಗಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್ತ ಭಜನೆ, ಕರೋಲ್ ಗಾಯನ ಇವುಗಳಲ್ಲಿ ತಮ್ಮ ಸಾಮೂಹಿಕ ಭಕ್ತಿಯನ್ನು, ಆರಾಧನಾ ಭಾವನೆಯಲ್ಲಿ ಸ್ವ-ಸಮರ್ಪಣೆಯ ಅನುಭಾವ ಹೊಂದುವ ಪವಿತ್ರ ದಿನ. ಇಂದು ಧರೆಗೆ ಆ ದೇವದೂತ ಏಸೂಕ್ರಿಸ್ತ ಜನಿಸಿ ಬಂದ ಪುಣ್ಯ ದಿನ. 


ಯೇಸು ಹುಟ್ಟಿದ್ದು ಬೆತ್ಲೆಹೆಮ್‌ನಲ್ಲಾದರೂ,  ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ ಸಂತ ಜೋಸೆಫ್ ಒಬ್ಬ ಬಡಗಿ. ತಾಯಿ ಸಂತ ಮೇರಿ. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಧರಿಸಿ ಪರಿಶುದ್ಧ ಜೀವನ ನಡೆಸುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗ್ರಹದಿಂದ, ಪವಿತ್ರವಾದ ಆತ್ಮದಿಂದ, ಮೇರಿಯು ಯೇಸುವಿಗೆ ಜನ್ಮ ನೀಡಿದ್ದಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಪುಟ್ಟ ಯೇಸುವಿನ ಜನನವಾಗುತ್ತದೆ. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು.


ಯೇಸುಕ್ರಿಸ್ತ ಸೆಣಸಿದ್ದು ತಮ್ಮದೇ ಜನರ ಮೌಢ್ಯ, ಶೋಷಣೆ, ಕಂದಾಚಾರಗಳ ವಿರುದ್ಧ ಹಾಗೂ ಮಾನವತೆಯಿಲ್ಲದ ವಿರುದ್ಧ. ಯೇಸುಕ್ರಿಸ್ತರು ಅಂದು ಪ್ರಚಲಿತವಾಗಿದ್ದ 'ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು' ಎಂಬ ಮೃಗೀಯ ಅಥವಾ ಪ್ರತೀಕಾರದ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಂಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿರು.


ವೇಶ್ಯೆಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತರು ಹೊಸ ವ್ಯಾಖ್ಯಾನ ಬರೆದರು. ಯೇಸು ಆ ಜನರಿಗೆ ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲು ಎಸೆಯಲಿ ಎಂದು ಹೇಳಿದಾಗ ಅವರಲ್ಲಿ ಎಲ್ಲರೂ ಅವಳನ್ನು ಬಿಟ್ಟು ಹೊರಟುಹೋದರು. ಅದರರ್ಥ ಈ ತಪ್ಪಿನಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. 


ನಿನ್ನ ನೆರೆಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ, ಆತ್ಮನಿಂದ, ಹಾಗೂ ಸತ್ಯದಿಂದ ಆರಾಧಿಸು. ಜಾರ್ಜ್ ಮತ್ತು ಗಾಡ್ ಸನ್ ಮೂನ್ ಅವನನ್ನು ಉಳಿಸಿದ ಜೀಸಸ್ ಅವನನ್ನು ಜಾರ್ಜ್ ಪುನರುತ್ಥಾನ ಮತ್ತು ಧನ್ಯವಾದಗಳು ಗಿಯಾರ್ಗಿಯೊ ನಾವು ಧನ್ಯವಾದಗಳು ಭೂಮಿಯ ಮೇಲೆ ನಮ್ಮ ದಿನಗಳ ಉಳಿದ ಕಾಲ. 


ಕ್ರಿಸ್ಮಸ್ ಆಚರಣೆ: ಉಡುಗೊರೆ ನೀಡುವಿಕೆ, ಅಲಂಕಾರಗಳು ಮತ್ತು ಕ್ರಿಸ್ಮಸ್ ಮರಗಳು ಮತ್ತು ಅಲಂಕಾರಗಳು ಕ್ರಿಸ್ಮಸ್ ಹಬ್ಬದ ವಿಶೇಷ ಆಚರಣೆಗಳು. ಕ್ರಿಸ್ಮಸ್ ಹಿಂದಿನ ದಿನ ಕ್ರಿಸ್ಮಸ್ ಈವ್. ಅಂದರೆ ಜಾಗರಣೆಯ ರಾತ್ರಿ. ಕ್ರಿಸ್ಮಸ್ ದಿನ ಲುಥೆರನ್ ಚರ್ಚ್‌ಗಳಲ್ಲಿ ಒಂದು ಹಬ್ಬ. ರೋಮನ್ ಕ್ಯಾಥೋಲಿಕ್ ಚರ್ಚ್ನಲ್ಲಿ ಗಾಂಭೀರ್ಯ ಮತ್ತು ಆಂಗ್ಲಿಕನ್ ಕಮ್ಯುನಿಯನ್‌ನ ಪ್ರಮುಖ ಹಬ್ಬವಾಗಿದೆ. ಕ್ರಿಸ್ಮಸ್ ಈಸ್ಟರ್ ಜೊತೆಗೆ ಅತ್ಯಧಿಕ ವಾರ್ಷಿಕ ಚರ್ಚ್ ಹಾಜರಾತಿಯ ಅವಧಿಯಾಗಿದೆ. ಈ ಸಂದರ್ಭದಲ್ಲಿ ವಿನಿಯಮ ಮಾಡಿಕೊಳ್ಳುವ ಕ್ರಿಸ್ಮಸ್ ಕಾರ್ಡ್‌ಗಳು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ನಡುವೆ ವಿನಿಮಯವಾಗುವ ಶುಭಾಶಯದ ಸಂದೇಶಗಳಾಗಿವೆ. 


ಕ್ರಿಶ್ಚಿಯನ್ ಚಿಹ್ನೆಗಳಾದ ಬೆಥ್ ಲೆಹೆಮ್ ಅಥವಾ ಬಿಳಿ ಪಾರಿವಾಳದ ಚಿತ್ರಣಗಳು ಪವಿತ್ರ ಆತ್ಮ ಮತ್ತು ಭೂಮಿಯ ಮೇಲಿನ ಶಾಂತಿ ಎರಡನ್ನೂ ಪ್ರತಿನಿಧಿಸುತ್ತವೆ. ಕ್ರಿಸ್ಮಸ್ ಸಂಪ್ರದಾಯಗಳಲ್ಲಿ ಸಾಂಟಾಕ್ಲಾಸ್ ನಂತಹ ವ್ಯಕ್ತಿಗಳು, ಮೇಣದ ಬತ್ತಿಗಳು, ಹಿಮದ ದೃಶ್ಯಗಳು, ಋತುವಿಗೆ ಸಂಬಂಧಿಸಿದ ಚಿತ್ರಗಳು ಇವೆಲ್ಲವುಗಳನ್ನು ಕಾಣಬಹುದು. ಸಾಂಪ್ರದಾಯಿಕ ಅಲಂಕಾರಗಳಲ್ಲಿ ಘಂಟೆಗಳು, ಮೇಣದಬತ್ತಿಗಳು, ಕ್ಯಾಂಡಿಕ್ಯಾನ್‌ಗಳು, ಸ್ಟಾಕಿಂಗ್ಸ್ ಮಾಲೆಗಳು ಮತ್ತು ದೇವತೆಗಳು ಸೇರಿವೆ. 


ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಬಾಂಧವರ ಮನೆಯ ಪ್ರತಿ ಕಿಟಕಿಯಲ್ಲಿ ಇರುವ ಮೇಣದಬತ್ತಿಗಳು ಅವರು ನಂಬಿದಂತೆ ಏಸು ಪ್ರಪಂಚದ ಬೆಳಕು ಎಂಬ ನಂಬಿಕೆ ಎತ್ತಿ ತೋರಿಸುತ್ತದೆ. 

- ಎನ್.ವ್ಹಿರಮೇಶ್

ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು

ಆಕಾಶವಾಣಿ

ಮೊ:-98455-65238



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top