ಮಂಗಳೂರು: ಗೃಹರಕ್ಷಕ ದಳದ ಧ್ಯೇಯ ವಾಕ್ಯವಾದ ‘ನಿಷ್ಕಾಮ ಸೇವೆ ಸೇವೆಯೇ ಪರಮಗುರಿ’ ಎಂಬ ಮಾತನ್ನು ಚಾಚೂ ತಪ್ಪದೇ ಪಾಲಿಸಿ ಸುಮಾರು 35 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ಪಾಂಡಿರಾಜ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ ನಿಷ್ಕಾಮ ಸೇವೆಯಿಂದ ಸಿಗುವ ಸಾರ್ಥಕತೆ ಇನ್ನಾವ ಸೇವೆಯಿಂದಲೂ ಸಿಗಲು ಸಾಧ್ಯವಿಲ್ಲ. ಸದಾ ಎಲೆಮರೆಯ ಕಾಯಿಯಂತೆ ದೇಶ ಕಾಯುವ ಮತ್ತು ದೇಶ ಕಟ್ಟುವ ಕಾಯಕ ಮಾಡುವ ಗೃಹರಕ್ಷಕರ ಸೇವೆ ನಿಜಕ್ಕೂ ಅಭಿನಂದನೀಯ. ಈ ಹಿನ್ನೆಲೆಯಲ್ಲಿ ಪಾಂಡಿರಾಜ್ ಅವರ ಮೂವತ್ತು ವರ್ಷಗಳ ಸಾರ್ಥಕ ಸೇವೆಯನ್ನು ಗೃಹರಕ್ಷಕ ಇಲಾಖೆ ಸದಾ ಸ್ಮರಿಸುತ್ತದೆ ಎಂದು ದ.ಕ. ಜಿಲ್ಲಾ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ಭಾನುವಾರದಂದು ಮೂಡಬಿದಿರೆ ಪ್ರಾಂತ್ಯ ಶಾಲೆಯಲ್ಲಿ ಮೂಡಬಿದ್ರಿ ಘಟಕದ ಪ್ರಭಾರ ಘಟಕಾಧಿಕಾರಿ ಪಾಂಡಿರಾಜ್ ಕೆ. ಇವರಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಮೂಡಬಿದಿರೆ ಪೊಲೀಸ್ ಠಾಣಾ ಇನ್‍ಸ್ಪೆಕ್ಟರ್ ಸಂದೇಶ ಪಿ.ಜಿ., ಮಾಜಿ ಘಟಕಾಧಿಕಾರಿ ದಯಾನಂದ ಪೈ, ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ಸಾಲ್ಯಾನ್, ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ನೂತನ ಘಟಕಾಧಿಕಾರಿ ಚಂದ್ರಶೇಖರ್, ಕಛೇರಿ ಸಿಬ್ಬಂದಿ ಶ್ಯಾಮಲಾ ಎ., ಸುಲೋಚನಾ, ಖತೀಜಮ್ಮ, ಸಂಜಯ್ ಹಾಗೂ ಮೂಡಬಿದ್ರಿ ಘಟಕದ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ