ಕೊಂಚಾಡಿ: ಉಚಿತ ನೇತ್ರತಪಾಸಣೆ; 24 ಜನರಿಂದ ನೇತ್ರದಾನ ಸಂಕಲ್ಪ

Upayuktha
0


ಮಂಗಳೂರು: ವಿಶ್ವ ದೃಷ್ಟಿ ದಿನದ ಅಂಗವಾಗಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಪ್ರಸಾದ್ ನೇತ್ರಾಲಯ ಮಂಗಳೂರು, ಆನ್ಸೈಟ್ ಎಸ್ಸಿಲೋರ್ ಲಕ್ಸೋಟಿಕ ಫೌಂಡೇಶನ್ ಬೆಂಗಳೂರು ಮತ್ತು ಸೆಂಚುರಿ ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 1ರಂದು ಭಾನುವಾರ ಶ್ರೀರಾಮ ಭಜನಾ ಮಂದಿರ (ರಿ) ಕೊಂಚಾಡಿ ದೇರೆಬೈಲು ಶ್ರೀಮತಿ ಲಕ್ಮಿ ಮತ್ತು ಶ್ರೀ ಶೇಷಪ್ಪ ದೇವಾಡಿಗ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರ ದಾನ ಸಂಕಲ್ಪ ನೋಂದಣಿ ಕಾರ್ಯಕ್ರಮ ನೆರವೇರಿತು. 


ಕಾರ್ಯಕ್ರಮವನ್ನು ದಕ ಜಿಲ್ಲೆ ವಿಶೇಷ ಚೇತನರ ಹಾಗೂ ಸಬಲೀಕರಣ ಇಲಾಖೆಯ MRW ಜಯಪ್ರಕಾಶ್ ಅವರು ಉದ್ಘಾಟಿಸಿ ನೇತ್ರ ದಾನದ ಅಗತ್ಯವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಕ್ಷಮ ದ ಕ ಜಿಲ್ಲಾ ಘಟಕ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸಕ್ಷಮದ ಧ್ಯೇಯ ಮತ್ತು ಉದ್ದೇಶಗಳನ್ನು ಅಲ್ಲದೆ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರ ದಾನದ ಅರಿವನ್ನು ತಿಳಿಸಿದರು.


 

ಪ್ರಸಾದ್ ನೇತ್ರಾಲಯದ ನೇತ್ರ ತಜ್ಞರಾದ ಡಾಕ್ಟರ್ ಶೀತಲ್ ನೇತ್ರ ದಾನದ ವಿಧಿ ವಿಧಾನಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಸಕ್ಷಮ ದ ಕದ ಪ್ರಭಾವದಿಂದ ಪ್ರೇರಣೆಗೊಂಡು ನೇತ್ರ ದಾನ ಮಾಡಿದ ಶ್ರೀ ಕೃಷ್ಣಮೂರ್ತಿ ಅಡಿಗ ಅವರ ಕುಟುಂಬದವರನ್ನು ದಾನಮಾನ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಮ ಭಜನಾ ಮಂದಿರದ ಅಧ್ಯಕ್ಷ ವಿಜಯ್ ಕುಮಾರ್, ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ರಾಜೇಶ್, ವಿಕಾಸಂ ಫೌಂಡೇಶನ್ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ್ ಹೊಸಮನೆ, ಸಾಮಾಜಿಕ ಕಾರ್ಯಕರ್ತ ನಾರಾಯಣ ಕಂಜರ್ಪಣೆ, ಸಕ್ಷಮ ದ ಕ ದ ಖಜಾಂಜಿ ಸತೀಶ್ ರಾವ್ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಕ್ಷಮ ದ ಕದ ಕಾರ್ಯದರ್ಶಿ ಹರೀಶ್ ಪ್ರಭು ನಿರೂಪಿಸಿ ಧನ್ಯವಾದ ಮಾಡಿದರು.


ಪ್ರಾರ್ಥನೆಯನ್ನು ಕುಮಾರಿ ಅನುಷಾ ಕಾಕುಂಜೆ ಮತ್ತು ಸಕ್ಷಮ ಗೀತೆಯನ್ನು ಶ್ರೀಮತಿ ಗೀತಾ ಲಕ್ಷ್ಮೀಶ ಅವರು ಮಾಡಿದರು. ದಾನಮಾನ ಪತ್ರವನ್ನು ಭಾಸ್ಕರ್ ಹೊಸಮನೆ ವಾಚಿಸಿದರು.


ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನ ಉಚಿತ ನೇತ್ರ ತಪಾಸಣೆಯ ಸೌಲಭ್ಯವನ್ನು ಪಡಕೊಂಡರು. ಅಲ್ಲದೆ 24 ಜನ ನೇತ್ರ ದಾನದ ಸಂಕಲ್ಪವನ್ನು ಕೈಕೊಂಡರು. ಹಿರಿಯ ಸಾಮಾಜಿಕ ಕಾರ್ಯಕರ್ತ ನಿಡುಗಳ ಸುಬ್ರಹ್ಮಣ್ಯ ಭಟ್ ಪ್ರಥಮ ನೇತ್ರದಾನದ ಸಂಕಲ್ಪವನ್ನು ಕೈಕೊಂಡರು. ನೇತ್ರ ದಾನ ಸಂಕಲ್ಪ ಮಾಡಿದವರಿಗೆ ಸ್ಥಳದಲ್ಲಿಯೇ ಪ್ರಮಾಣ ಪತ್ರವನ್ನು ಪ್ರಸಾದ್ ನೇತ್ರಾಲಯದಿಂದ ವಿತರಿಸಲಾಯಿತು.


ಅರ್ಹ ವ್ಯಕ್ತಿಗಳಿಗೆ ಉಚಿತ, ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸುವ ವ್ಯವಸ್ಥೆ ಮಾಡಲಾಯಿತು. ಅದಲ್ಲದೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆಯ ಅವಕಾಶವನ್ನು ಕಲ್ಪಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top