ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳ ಸಭೆ, ಘಟಕದ ಅಧ್ಯಕ್ಷ ಮಂಜುನಾಥ ಎಸ್ ರೇವಣ್ಕರ್ ಅಧ್ಯಕ್ಷತೆಯಲ್ಲಿ, ನಗರದ ಶಾರದಾ ವಿದ್ಯಾಲಯದಲ್ಲಿ ಜರುಗಿತು.
ದತ್ತಿ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಅಲ್ಲದೆ ಆಡಳಿತದಲ್ಲಿ ಕನ್ನಡ ಅನುಷ್ಠಾನ, ಕನ್ನಡ ಪರ ಒಲವು ಮೂಡಿಸುವಿಕೆ, ಬ್ಯಾಂಕ್, ಅಂಚೆ ಕಚೇರಿ, ಸರಕಾರೀ ಕಚೇರಿಗಳಲ್ಲಿ ಕನ್ನಡ ಭಾಷೆಯ ಬಳಕೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಹಿಂದಿನ ಎರಡು ಆರ್ಥಿಕ ವರ್ಷಗಳ ಲೆಕ್ಕ ಪತ್ರವನ್ನು ಮಂಡಿಸಿದರು ಮತ್ತು ಅವುಗಳನ್ನು ಸ್ವೀಕರಿಸಲಾಯಿತು.
ಕಸಾಪ ವಿದೇಶೀ ರಾಯಭಾರಿ ಡಾ. ಮುರಲೀಮೋಹನ್ ಚೂಂತಾರು ವಿದೇಶಗಳಲ್ಲಿ ಕನ್ನಡ ಯಾತ್ರಾನುಭವ ಹಂಚಿಕೊಂಡರು. ಸಮಿತಿಯ ಚಂದ್ರಶೇಖರ ನಾವುಡ, ರತ್ನಾವತಿ ಬೈಕಾಡಿ, ಡಾ. ಮೀನಾಕ್ಷಿ ರಾಮಚಂದ್ರ, ಸುಖಲಾಕ್ಷಿ, ರಘು ಇಡ್ಕಿದು, ಬೆನೆಟ್ ಅಮ್ಮನ್ನ, ಬಿ. ಕೃಷ್ಣಪ್ಪ ನಾಯ್ಕ್, ನಿಜಗುಣ ದೊಡ್ಮನಿ, ಮುರಳೀಧರ ಭಾರದ್ವಾಜ್ ಸಲಹೆ ಸೂಚನೆಗಳನ್ನು ನೀಡಿದರು. ಉಷಾ ಜಿ. ಪ್ರಸಾದ್ ಪ್ರಾರ್ಥಿಸಿದರು. ಗಣೇಶ್ ಪ್ರಸಾದ್ ಜೀ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ