ಮಂಗಳೂರು: ತೆಲುಗು ಶೆಟ್ಟಿ ಸಮುದಾಯ ಬಾಂಧವರ ಆರಾಧನಾ ಕೇಂದ್ರ, ಗೌರಿಮಠ ರಸ್ತೆ ಮಂಗಳೂರು ಇಲ್ಲಿನ ಶ್ರೀ ಮಹಾಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯ ಪ್ರಥಮ ಹೆಜ್ಜೆಯಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮವು ದೇವಸ್ಥಾನದ ಪರಿಸರದಲ್ಲಿ ನೆರವೇರಿತು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಡಿ. ವೇದವ್ಯಾಸ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನನಗೆ ಅನೇಕ ದೇವಾಲಯಗಳ ನವೀಕರಣ ಕಾರ್ಯಗಳಲ್ಲಿ ಭಾಗವಹಿಸುವ ಭಾಗ್ಯ ದೊರೆಯುತ್ತಿದೆ. ತೆಲುಗು ಶೆಟ್ಟಿ ಸಮುದಾಯದವರು ನನ್ನ ಮೇಲೆ ಇರಿಸಿರುವ ಪ್ರೀತಿ ಅನನ್ಯ. ಇಂದು ಅವರು ಸಮಾಜದಲ್ಲಿ ಒಂದಾಗಿ ಎಲ್ಲ ವರ್ಗದವರನ್ನೂ ಸೇರಿಸಿಕೊಂಡು ದೇವರ ಸೇವೆಯ ಜೊತೆಗೆ ಸಮಾಜಮುಖೀ ಕಾರ್ಯಗಳೊಂದಿಗೆ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಈ ಪುಣ್ಯ ಕಾರ್ಯಕ್ಕೆ ಸರ್ವ ರೀತಿಯ ಸಹಕಾರ ಒದಗಿ ಬರುವಂತೆ ಶ್ರಮಿಸುವೆ ಎಂದರು.
ಮಂಗಳೂರು ಮಹಾನಗರದ ಮಹಾ ಪೌರರಾಗಿರುವ ಮನೋಜ್ ಕುಮಾರ್ ಕೋಡಿಕಲ್ ಮಾತನಾಡಿ, ಇಂತಹ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಕಾರ್ಯ ಕೂಡ ತಮ್ಮ ಆದ್ಯ ಕರ್ತವ್ಯಗಳಲ್ಲಿ ಸೇರಿದೆ ಎಂದರು.
ಸ್ಥಳೀಯ ಕಾರ್ಪೊರೇಟರ್ ಪೂರ್ಣಿಮಾ ಎಂ, ಇಂತಹ ಪುಣ್ಯ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ನುಡಿದರು. ಬಿಜೆಪಿ ದಕ ಜಿಲ್ಲಾ ಕಾರ್ಯದರ್ಶಿ ರಮೇಶ್ ಹೆಗ್ಡೆ, ಪ್ರಧಾನ ಕಾಶಿ ಸದನದ ಜಯರಾಮ ಭಟ್, ಮುಖ್ಯಪ್ರಾಣ ದೇವಸ್ಥಾನದ ಗುರುರಾಜ ಭಟ್, ಈಶ್ವರಿ ಮೆಟಲ್ಸ್ ನ ಎಂ.ಡಿ.ಪಿ ಆರ್ಮುಗಂ, ಶ್ರೀನಿಧಿ ಕಂಪ್ಯೂಟರ್ಸ್ ಪ್ರೈ ಲಿ. ಎಂ.ಡಿ. ರೊಟೇರಿಯನ್ ರಾಜೇಶ್ ಎಸ್. ರಾವ್, ಮಂಗಳ ಜ್ಯೂವೆಲ್ಲರ್ಸ್ ನ ಮಚೇಂದ್ರನಾಥ್, ಮಹಾಲಕ್ಷ್ಮೀ ಜ್ಯೂವೆಲ್ಲರ್ಸ್ ನ ರವೀಂದ್ರ ನಿಖಂ, ಜನತಾ ಡಿಲಕ್ಸ್ ಪಾಲುದಾರ ರಾಜ ಹೊಳ್ಳ, ಕ ಸಾ ಪ ತಾ । ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ಬಜಿಲಕೇರಿ ಫ್ರೆಂಡ್ಸ್ ನ ಹರೀಶ್, ಮಯೂರ್ ಮಾರ್ಕೆಟಿಂಗ್ ನ ಭರತ್ ಸಿಂಗ್ ಸೋಲಂಕಿ, ಉದ್ಯಮಿ ಅಶೋಕ್ ಧರಿವಾಲ್, ಸಲಹಾ ಸಮಿತಿಯ ತಂಗವೇಲು ಉಪಸ್ಥಿತರಿದ್ದು ಶುಭ ಕೋರಿದರು.
ಶ್ರೀ ಮಹಾಮಾರಿಯಮ್ಮ ಮಹಿಳಾ ಮಂಡಲದ ಸದಸ್ಯೆಯರು ಪ್ರಾರ್ಥಿಸಿದರು. ಪಿ. ಸಿ. ಗುರು ಮತ್ತು ವಿದ್ಯಾ ದಿನೇಶ್ ನಿರೂಪಿಸಿದರು. 24 ಮನೆ ತೆಲುಗು ಶೆಟ್ಟಿ ಸಮುದಾಯದ ಅಧ್ಯಕ್ಷ ಕನಕರಾಜ್ ಎಂ ವಂದಿಸಿದರು.
ದಿನೇಶ್ ಎಂ. ಆರ್, ಗೋಪಾಲ ವಿ, ಮುರುಗೇಶ್ ಡಿ., ಗಣೇಶ್ ಆರ್, ರಮೇಶ್ ಜಿ, ವೆಂಕಟೇಶ್ ಕೆ. ಪಿ., ಅಶ್ವಿನ್ ಎಸ್, ಸಪ್ನಾ ರಘು, ಗಣೇಶ್ ಪಿ, ರಮ್ಯಾ ಕೆ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ