ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

Upayuktha
0


ಮುಳಿಯಾರು: ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಶನಿವಾರ ಮತ್ತು ಭಾನುವಾರ (ಡಿ.7-8) ಸಂಪನ್ನವಾಗಿ ಜರಗಿದವು.


ಪ್ರಥಮ ದಿನ ಅಭಿಷೇಕ ಪೂಜೆ, ಉಷಪೂಜೆ, ಗಣಹೋಮ, ಕಲಶಪೂಜೆ, ಶ್ರೀ ದೇವರಿಗೆ ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ, ವಿಧಾತ್ರಿ ಭಟ್ ಅಬ್ರಾಜೆ ಬಳಗದವರಿಂದ ಸಂಗೀತಾರ್ಚನೆ ಜರಗಿತು. ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ಇವು ಜರಗಿದವು.


ರಾತ್ರಿ ಶ್ರೀ ಭೂತಬಲಿ, ಶ್ರೀ ಪದ್ಮನಾಭ ಮನೋಳಿತ್ತಾಯ ಮತ್ತು ಬಳಗದವರಿಂದ ವೇದಮಂತ್ರ ಪಠಣ, ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ಗುರುಗಳಾದ ಶ್ರೀಮತಿ ಉಷಾ ಈಶ್ವರ ಭಟ್ ಮತ್ತು ಶಿಷ್ಯರಿಂದ ಸಂಗೀತ ಸೇವೆ, ರಾಜಾಂಗಣದಲ್ಲಿ ನೃತ್ಯಸೇವೆ, ಕೋಟೂರಿಗೆ ಕಟ್ಟೆ ಸವಾರಿಯಾಗಿ ಹಿಂದುರಿಗಿ ಬಂದ ಬಳಿಕ ಕಟ್ಟೆಪೂಜೆ, ಇವು ಜರಗಿದವು. ಉತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ ಸೇವೆಯು ಜರಗಿತು.

         

ದ್ವಿತೀಯ ದಿನ ಬೆಳಗ್ಗೆ ಅಭಿಷೇಕ ಪೂಜೆ, ಉಷಪೂಜೆ, ಶಿವೇಲಿ, ರಾಜಾಂಗಣದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಮಹಾ ಪೂಜೆ, ಮಂತ್ರಾಕ್ಷತೆ ಮತ್ತು ಪ್ರಸಾದ ಭೋಜನ ಜರಗಿದವು. ಮಧ್ಯಾಹ್ನ ವಿಷ್ಣುಮೂರ್ತಿ ದೈವದ ಕೋಲವು ಜರಗಿ ದೈವಾರಾಧನೆ ಸಂಪನ್ನವಾಯಿತು. ಶ್ರೀ ಗಿರೀಶ ಅಡಿಗ ಕರಿಚೇರಿ, ಮುರಳಿ ಅಡಿಗ ಕೂಡ್ಲು ಅವರಿಂದ ದೇವರ ನೃತ್ಯಸೇವೆ, ದರ್ಶನಬಲಿ ಜರಗಿದವು. ರಾತ್ರಿ ಶ್ರೀರಂಗಪೂಜೆ ನೆರವೇರಿತು. ಕ್ಷೇತ್ರ ಪ್ರಬಂಧಕ  ಎನ್. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು. ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಅನಂತ ಪದ್ಮನಾಭ ಮಯ್ಯ ಅವರು ವೈದಿಕ ವಿಭಾಗ ಕಾರ್ಯ ನಿರ್ವಹಣೆಯಲ್ಲಿ ಸಹಕಾರವನ್ನಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top