ಧನುರ್ಮಾಸ ವಿಶೇಷ

Upayuktha
0




ನುರ್ಮಾಸದಲ್ಲಿ ಶ್ರೀ ಹರಿಯನ್ನು ವಿಶೇಷವಾಗಿ ಪೂಜಿಸುವ ವಿಧಾನವಿದೆ. ಸೂರ್ಯದೇವನು ಧನುಷ್ ರಾಶಿಯಲ್ಲಿ ಪ್ರವೇಶಿಸುತ್ತಾನೆ. ಕೊನೆಯಲ್ಲಿ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಆದ್ದರಿಂದ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.ಧನುರ್ಮಾಸವನ್ನು ಈ ತಿಂಗಳ, ( ಡಿಸೆಂಬರ್ ) 18 ರಿಂದ ಜನವರಿ 14 ಅಥವಾ 15 ರವರೆಗೆ ಆಚರಿಸುತ್ತಾರೆ. 


ಶ್ರೀ ವಿಷ್ಣುವನ್ನು ಈ ದಿನಗಳಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ಪೂಜಿಸುವ ಪದ್ಧತಿ ಇದೆ. ನಸುಕಿನಲ್ಲಿ ಎದ್ದು ಪೂಜೆ ಮಾಡಿ, ಮಧ್ಯಾಹ್ನ ಹೆಸರುಬೇಳೆ ಪಾಯಸ, ಸೆಜ್ಜಿ ರೊಟ್ಟಿ, ಬೆಣ್ಣೆ, ಹೂರಣದ ಕಡಬು ಅಥವಾ ಹೋಳಿಗೆ, ದೋಸೆ, ನಾನಾ ವಿಧದ ಪಲ್ಯಗಳು, ಚಟ್ನಿ  ಕೋಸಂಬರಿ ಮುಂತಾದ ಭಕ್ಷ್ಯಗಳನ್ನು ತಯಾರಿಸಿ, ದೇವರ ಪೂಜೆ ಮಾಡಿ ಸೂರ್ಯೋದಯ ಬಳಿಕ ನೈವೇದ್ಯ ಮಾಡಿ ಊಟ ಮಾಡುತ್ತಾರೆ.


ತ್ರಿ ರಂಗದೇವರ ದರ್ಶನ:

ಈ ಪರ್ವಕಾಲದಲ್ಲಿ ಅದಿರಂಗ, ಮಧ್ಯರಂಗ, ಅಂತ್ಯರಂಗರನ್ನು ದರ್ಶನ ಮಾಡುವುದು ಪುಣ್ಯ ಸಂಚಯನಕ್ಕೆ ದಾರಿ ಎಂದು ನಂಬುತ್ತಾರೆ. ನಸುಕಲ್ಲಿ ಎದ್ದು ಶ್ರೀರಂಗಪಟ್ಟಣದಲ್ಲಿರುವ ಆದಿ ರಂಗ,  ಶಿವನ ಸಮುದ್ರದಲ್ಲಿರುವ ಜಗನ್ಮೋಹನನಾದ ಮಧ್ಯ ರಂಗ,, ಅತ್ಯಂತ ಸುಂದರವಾಗಿರುವ ತಮಿಳುನಾಡಿನ ತ್ರಿಚಿ ಯಲ್ಲಿರುವ (ಶ್ರೀರಂಗಮ್) ಶ್ರೀರಂಗನನ್ನು ದರ್ಶನ ಮಾಡಬೇಕು. ಈ ಮೂರು ರಂಗನಾಥಸ್ವಾಮಿಯ ದೇಗುಲಗಳು ಕಾವೇರಿ ನದಿಯ ದಂಡೆಯಲ್ಲಿವೆ ಎನ್ನುವುದೇ ಇನ್ನೊಂದು ವಿಶೇಷ.

ಹೀಗೇ ಧನುರ್ಮಾಸವು ಅನೇಕ ವಿಶೇಷತೆಗಳಿಂದ ಕೂಡಿದೆ.


✍️ರೇಖಾ. ಮುತಾಲಿಕ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top