ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಕೂಡ ಬದುಕುವ ಹಕ್ಕು ಖಂಡಿತವಾಗಿಯೂ ಇದೆ. ಮನುಷ್ಯ ತನಗೆ ಬೇಕಾದ ಹಾಗೆ ಜೀವನವನ್ನು ಮಾಡುತ್ತಿರುತ್ತಾನೆ. ಆದರೆ ಮಾನವ ಯಾಕೆ ಮುಗ್ದ ಸಾಕು ಪ್ರಾಣಿಗಳನ್ನು ತನಗೆ ಉಪಯೋಗವಿದ್ದಾಗ ಅದರ ಸದುಪಯೋಗವನ್ನು ಪಡೆದು ಹೆಣ್ಣು ನಾಯಿಯೆಂದು ಅಂದಾಕ್ಷಣ ಅವುಗಳನ್ನು ಬೀದಿಗಳಿಗೆ ಬಿಟ್ಟು ಅದಕ್ಕೆ ಒಂದು ಹೊತ್ತು ಊಟಕ್ಕೂ ಗತಿಯಿಲ್ಲದಂತೆ ಮಾಡುವುತ್ತಿರುವುದು ನಿಜಕ್ಕೂ ಬೇಸರವಾದ ಸಂಗತಿಯೇ ಸರಿ.
ಆ ಮೂಕ ಪ್ರಾಣಿಗಳಿಗೂ ಕೂಡ ಜೀವನವಿದೆ. ಅದಕ್ಕೂ ಕೂಡ ಪ್ರೀತಿಸುವವರು ಬೇಕು. ಆ ಮುಗ್ದ ಪ್ರಾಣಿಗಳಿಗೂ ಕೂಡ ಎಲ್ಲರಂತೆ ಸ್ವತಂತ್ರ‍್ಯ ವಾಗಿ ಬದುಕಬೇಕೆನ್ನುವ ಆಸೆ ಖಂಡಿತವಾಗಿಯೂ ಇರುತ್ತದೆ. ಎಲ್ಲೋ ಒಂದು ಕಡೆ ಎಲ್ಲವು ಸಾಮರ್ಥ್ಯಯಿರುವ ನಾವುಗಳು ಮುಗ್ದ ಪ್ರಾಣಿಗಳ ಬದುಕುವ ಹಕ್ಕನ್ನು ಕಿತ್ತು ತಿನ್ನುತ್ತಿದ್ದೇವೆಯೇ?
ಕೆಲವರು ಹೇಳುತ್ತಾರೆ, ಈ ಬೀದಿನಾಯಿಗಳಿಂದ ತೊಂದರೆಗಳು ಆಗ್ತಾ ಇದೆ. ನಮ್ಮ ದಾರಿಗೆ ಅಡ್ಡವಾಗಿ ನಿಲ್ಲುತ್ತೆ ಅಂತ, ಆದ್ರೆ ಅದಕ್ಕೇನು ತಿಳಿದಿರುತ್ತೆ, ಅದಕ್ಕೆ ಆಸರೆನೆ ಇಲ್ಲದೇ ಇದ್ದಾಗ ಅದು ಎಲ್ಲಿ ಅಂತ ಹೋಗಲು ಸಾಧ್ಯ.
ಅದರಲ್ಲೂ ಹೆಣ್ಣು ನಾಯಿ ಮರಿ ಎಂದ ತಕ್ಷಣ ಇನ್ನು ಕಣ್ಣು ಬಿಡದ ಆ ಮುಗ್ದ ನಾಯಿಗಳನ್ನು ಬೀದಿ ಬದಿಗಳಿಗೆ ಬಿಟ್ಟು ತನ್ನ ಕೆಲಸ ಆಯಿತೆಂದು ಕೈ ತೊಳೆದುಕೊಳ್ಳುವವರು ಎಷ್ಟೋ ಮಂದಿ ಇದ್ದಾರೆ.
ಅದಕ್ಕೂ ಬದುಕುವ ಹಕ್ಕಿದೆ ಅಲ್ಲವೇ. ಆ ಪ್ರಾಣಿಗಳು ನಮ್ಮಿಂದ ಪ್ರೀತಿ, ಹೊಟ್ಟೆ ತುಂಬಾ ಊಟ ಜೊತೆಗೆ ಇರಲು ಒಂದು ಸೂರು ಇದನ್ನು ಮಾತ್ರ ನಿರೀಕ್ಷೆಸುವುದಲ್ಲದೆ. ಬೇರೇನೂ ಅಲ್ಲಾ.
ಆದರೆ ಬೀದಿ ನಾಯಿಗಳು ಹತ್ತಿರಕ್ಕೆ ಬಂದರೆ ಸಾಕು ನಮಗೆ ಕಚ್ಚುತ್ತೆ ಅಂತ ಹೆದರುವವರು, ಅದಕ್ಕೆ ಕಲ್ಲು ಬಿಸಾಡುವವರು ಇದ್ದಾರೆ, ಆದರೆ ಮೂಕ ಪ್ರಾಣಿಗಳೆಂದ ಮಾತ್ರಕ್ಕೆ ಅದನ್ನು ಅಸಡ್ಡೆಯಿಂದ ನೋಡುವುದು ಸರಿಯಲ್ಲ. ಅದನ್ನು ಪ್ರೀತಿಯಿಂದ ಮಾತನಾಡಿಸಿದರೆ, ಮುದ್ದಾಡಿದರೆ ಅದು ನಮ್ಮ ಜೊತೆ ಪ್ರೀತಿಯಿಂದಲೇ ವರ್ತಿಸುತ್ತದೆ.
ಅದೆಷ್ಟೋ ಜನ ನಾಯಿಗಳನ್ನು ಬೆಕ್ಕುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವುದರಿಂದ, ಅಪಘಾತಗಳಿಗೆ ಸಿಲುಕಿ ನರಳಿ ನರಳಿ ಸಾಯುತ್ತಿದೆ. ಎಷ್ಟೋ ಬೀದಿ ನಾಯಿಗಳು ವೃದ್ಧರಿಗೆ ಮಕ್ಕಳಿಗೆ ರೇಬಿಸ್ ಕಾಯಿಲೆಯಿಂದ ಕಚ್ಚುತ್ತೆ, ಹೌದು ಆದ್ರೆ ಆ ನಾಯಿಗಳಿಗೆ ಮಮಕಾರವೇ ಇಲ್ಲ ಅಂತ ಅಲ್ಲ, ಅವುಗಳಿಗೂ ಜೀವಿಸಲು ಅವಕಾಶವನ್ನೂ ಕಲ್ಪಿಸಿದರೆ ಅವುಗಳು ಕೂಡ ಮಾನವರನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತವೆ. ಹಾಗೂ ರೇಬಿಸ್ ಖಾಯಿಲೆಗಳು ಬಂದಾಗ ಸರಿಯಾದ ಚಿಕೆತ್ಸೆ ಕೊಡಲು ಯಾರು ಇಲ್ಲ ಅಂದಾಗ ಅವುಗಳಾದರೂ ಏನೂ ಮಾಡಬೇಕು?
ಮಾನವರಾದ ನಾವುಗಳು ಸಮಯಕ್ಕೆ ಸರಿಯಾಗಿ ಆಹಾರವನ್ನು ತೆಗೆದುಕೊಳ್ಳುತ್ತೇವೆ. ಆದರೆ ಏಷ್ಟೋ ಕಡೆಗಳಲ್ಲಿ ಬೀದಿ ನಾಯಿಗಳಿಗೆ ಒಂದೂ ಹೊತ್ತು ಊಟವನ್ನು ಹಾಕಲು ಗತಿಯಿಲ್ಲದಂತೆ ಆಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಸಂಸ್ಥೆಗಳು ಈ ಮೂಕ ಪ್ರಾಣಿಗಳನ್ನು ರಕ್ಷಿಸುವ ಮೂಲಕ ಮಾನವೀಯತೆಯನ್ನು ಉಳಿಸುತ್ತಿದ್ದಾರೆ. ಅದಕ್ಕೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿಗಳ ಜೊತೆಗೆ ಅನಾರೋಗ್ಯ ಪೀಡಿತ ನಾಯಿಗಳಿಗೆ ಚಿಕಿತ್ಸೆಯನ್ನು ನೀಡುವ ಕಾರ್ಯವನ್ನು ಮಾಡುತ್ತಿರುವುದು ಪ್ರಶಂಸನೀಯ.
ಅದರಲ್ಲೂ ಬಿದಿನಾಯಿಗಳಿಗೆ ಕೆಲವು ಮಂದಿ ಅನ್ನ, ಬಿಸ್ಕೆಟ್, ನೀರುಗಳನ್ನು ಇಟ್ಟು ಪೋಷಿಸುತ್ತಿದ್ದಾರೆ. ಎಲ್ಲಾ ಪ್ರಾಣಿಗಳಿಗೂ ಜೀವನ ಇದೆ. ನಮ್ಮಲ್ಲಿ ಆಗುವಂತಹ ಸಣ್ಣ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆಯೋಣ. ಹಾಗೂ ಅಮ್ಮನ ಪ್ರೀತಿಯನ್ನು ಕೊಡುವ ಅದೆಷ್ಟೋ ಪೆಟ್ ಕೇರ್ ಸಂಸ್ಥೆಗಳ ಜೊತೆ ನಾವು ಕೈಜೋಡಿಸೋಣ.
-ಕಲಾನ್ವಿತ ಜೈನ್
ದ್ವಿತೀಯ ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಂ ಕಾಲೇಜು ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ