ಮನುಷ್ಯತ್ವದಿಂದ ಸುಂದರ ಸಮಾಜ ನಿರ್ಮಾಣ: ಬಿರಾದಾರ

Upayuktha
1 minute read
0



 

ಬೀಳಗಿ: ಎಲ್ಲಿ ಕ್ರಿಯಾಶೀಲತೆ ಹಾಗೂ ಚಟುವಟಿಕೆ ಇರುತ್ತದೋ ಅಲ್ಲಿ ಜೀವಂತಿಕೆ ಇರುತ್ತದೆ. ಎಲ್ಲಿ ಜೀವಂತಿಕೆ ಇರುತ್ತದೋ ಅಲ್ಲಿ ಮನುಷ್ಯ ಇರುತ್ತದೆ. ಎಲ್ಲಿ ಮನುಷ್ಯತ್ವ ಇರುತ್ತದೋ ಅಲ್ಲಿ ಮೌಲ್ಯ ಇರುತ್ತದೆ. ಅಲ್ಲಿ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ ಅವರ ಜನ ಸಂಪರ್ಕಾಧಿಕಾರಿ ಡಾ||ಮಹಾಂತೇಶ ಎಸ್.ಬಿರಾದಾರ ಹೇಳಿದರು.


ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಪ್ರಥಮ ದರ್ಜೆ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯ ಮತ್ತು ಪದವಿಪೂರ್ವ ಮಹಾವಿದ್ಯಾಲಯದ ಬಿಸ್ಸಿ ಹಾಗೂ ಬಿಕಾಂ, ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪರಿವರ್ತನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಇನ್ನೂ ಅನೇಕ ಮಹಾತ್ಮರ ಮೂರ್ತಿಗಳ ಸ್ಥಾಪನೆ ಮಾಡುವ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.


ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮವಾದ ಗುರಿ ಇಟ್ಟುಕೊಂಡು, ಸಾಧನೆ ಮಾಡುವ ಛಲ ಮೈಗೂಡಿಸಿಕೊಂಡರೆ ಮಾತ್ರ ದೇಶ ಅಭಿವೃದ್ಧಿಯ ಪತ್ತದತ್ತ ಸಾಗಲಿದೆ ಎಂದರು.


ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಿಯು ಕಾಲೇಜು ವ್ಯಾಸಂಗ ಮುಗಿದ ನಂತರ ಡಿಗ್ರಿ ಮಹತ್ವದ ಘಟ್ಟವಾಗಿದೆ. ಶಿಕ್ಷಣ ಪಡೆದ ನಂತರ ತಂದೆ-ತಾಯಿಗಳನ್ನು ಸರಿಯಾಗಿ ಪಾಲನೆ ಮಾಡದೇ ವೃದ್ಧಾಶ್ರಮಕ್ಕೆ ಬಿಡುವುದು ವಿಷಾದನೀಯ. ಈ ರೀತಿ ಯಾರೂ ಮಾಡಬಾರದು ಎಂದರು.


ಸಂಸ್ಥೆಯ ಆಡಳಿತಾಧಿಕಾರಿ ಡಿ.ಎಸ್.ಕುಂಠೆ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಎಲ್.ಎಚ್.ಕತ್ತಿ, ಕಾಲೇಜು ಪ್ರಾಂಶುಪಾಲ ಜಿ.ಆರ್.ಪಾಟೀಲ, ಮೋಜೋಂ ಮುಲ್ಲಾ, ಎಸ್.ಎಸ್. ಕುಲಕರ್ಣಿ, ಎಸ್.ಎಸ್.ಆಗೋಜಿ, ನೇತ್ರಾವತಿ ಎನ್.ಎಸ್ ಇದ್ದರು. ಬಿಎಸ್ಸಿ ಬಿಕಾಂ ಹಾಗೂ ಮಹಾ ವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top