ಮಂಗಳೂರು ಚುಸಾಪ ವತಿಯಿಂದ ಕೃತಿ‌ ಲೋಕಾರ್ಪಣೆ, ಕವಿಗೋಷ್ಠಿ

Upayuktha
0




ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇದರ ವತಿಯಿಂದ ಕೃತಿ ಲೋಕಾರ್ಪಣೆ, ಗೌರವ ಸನ್ಮಾನ, ಕವಿಗೋಷ್ಠಿ, ಗಾನಸುಧೆ ಸಹಿತ ಸಾಹಿತ್ಯ ಸಂಭ್ರಮ 2024 ಕಾರ್ಯಕ್ರಮ ಭಾನುವಾರ ಕೆನರಾ ಕಾಲೇಜು ಸಭಾಂಗಣ ಮಂಗಳೂರು ಇಲ್ಲಿ ನಡೆಯಿತು. ಹಿರಿಯ ಕವಯಿತ್ರಿ ಪಾರ್ವತಿ ಶಾಸ್ತ್ರಿಯವರ ಭಕ್ತಿ ಕುಸುಮಾಂಜಲಿ ಎಂಬ ಭಕ್ತಿಗೀತೆ ಸಂಕಲನ ಹಾಗೂ ಭಾವದೊಸಗೆ ಎಂಬ ಕವನ ಸಂಕಲನ ಕ್ರಮವಾಗಿ ಹಿರಿಯ ಸಾಹಿತಿಗಳು ಮತ್ತು ಅಂಕಣಕಾರರಾದ  ಪ್ರೊ| ವಿ. ಬಿ. ಅರ್ತಿಕಜೆ ಅವರು ಹಾಗೂ ಉಪನ್ಯಾಸಕರ  ವಿಶ್ವನಾಥ. ಕೆ ಅವರು ಬಿಡುಗಡೆಗೊಳಿಸಿ ಕೃತಿ ಪರಿಚಯಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಹರೀಶ ಸುಲಾಯ ಒಡ್ಡಂಬೆಟ್ಟು ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜನಪ್ರಿಯ ಕವಿಗಳು ಮತ್ತು ಪ್ರಾಧ್ಯಾಪಕರಾದ ರಘು ಇಡ್ಕಿದು ಅವರು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ  ನೇಮು ಪೂಜಾರಿ, ಇರಾ ಅವರು ಗೌರವ ಉಪಸ್ಥಿತಿಯಲ್ಲಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಇದೇ ಸಂದರ್ಭದಲ್ಲಿ ಕೃತಿಕಾರರಾದ ಪಾರ್ವತಿ ಶಾಸ್ತ್ರಿ, ಕೃತಿ ಬಿಡುಗಡೆಗೊಳಿಸಿ ಪರಿಚಯಿಸಿದ ಪ್ರೊ| ವಿ. ಬಿ. ಅರ್ತಿಕಜೆ ಮತ್ತು ವಿಶ್ವನಾಥ. ಕೆ ಇವರನ್ನು ಫಲಪುಷ್ಪಗಳನ್ನಿತ್ತು ಶಾಲು ಹೊದಿಸಿ ಗೌರವಿಸಲಾಯಿತು. ಕವಿಗೋಷ್ಠಿಯ ಅಧ್ಯಕ್ಷರಾದ ಆಂಗ್ಲ ಭಾಷಾ ಪ್ರಾಧ್ಯಾಪಕಿ ಹಾಗೂ ಬರಹಗಾರ್ತಿ ಪರಿಣಿತ ರವಿ ಉಪಸ್ಥಿತರಿದ್ದರು. ಕು. ದಿಶಾ ಸಿ.ಜಿ. ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ,  ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಗೋಪಾಲಕೃಷ್ಣ ಶಾಸ್ತ್ರಿ ಅವರು ಸ್ವಾಗತಿಸಿ ಕೋಶಾಧಿಕಾರಿ  ಭಾಸ್ಕರ್ ಎ. ವರ್ಕಾಡಿ ಅವರು ವಂದಿಸಿದರು. ಉಪಾಧ್ಯಕ್ಷರಾದ  ಹಿತೇಶ್ ಕುಮಾರ್ ಎ ಅವರು ಕಾರ್ಯಕ್ರಮ ನಿರೂಪಿಸಿದರು. 


ಬಳಿಕ ಆಂಗ್ಲ ಭಾಷಾ ಪ್ರಾಧ್ಯಾಪಕಿ ಹಾಗೂ ಬರಹಗಾರ್ತಿ  ಪರಿಣಿತ ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸೌಮ್ಯಾ ಗೋಪಾಲ್, ಅನುರಾಧಾ ರಾಜೀವ್ ಸುರತ್ಕಲ್, ಸತ್ಯವತಿ ಭಟ್ ಕೊಳಚಪ್ಪು, ಗುಣಾಜೆ ರಾಮಚಂದ್ರ ಭಟ್, ಗೀತಾ ಲಕ್ಷ್ಮೀಶ್,  ಮಂಡ್ಯ ಅನಾರ್ಕಲಿ ಸಲೀಂ ಮಂಗಳೂರು, ಡಾ. ಸುರೇಶ ನೆಗಳಗುಳಿ, ರೇಮಂಡ್ ಡಿಕೂನ ತಾಕೊಡೆ, ಆಯಿಷಾ ಪೆರ್ನೆ, ಸುಮಾಡ್ಕರ್ ಸ್ವರೂಪ, ಪ್ರೇಮಾ ಶ್ರೀಕೃಷ್ಣ, ಅಶೋಕ ಎನ್ ಕಡೇಶಿವಾಲಯ, ಶಮೀಮ ಕುತ್ತಾರ್, ರಾಧಾಕೃಷ್ಣ ಮಂಗಳೂರು, ಸೌಮ್ಯ ಆರ್ ಶೆಟ್ಟಿ, ಎಂ ಎಸ್ ವೆಂಕಟೇಶ್ ಗಟ್ಟಿ, ಚಂದ್ರಿಕಾ ಕೈರಂಗಳ, ಸತೀಶ್ ಬಿಳಿಯೂರು, ಎಮ್. ಪಿ ಬಷೀರ್ ಅಹ್ಮದ್ ಬಂಟ್ವಾಳ, ಮನ್ಸೂರ್ ಮುಲ್ಕಿ, ಉಮೇಶ್ ಶಿರಿಯ, ವಾಣಿಶ್ರೀ ಕೊಂಚಾಡಿ, ಶೈಲಜಾ ಕೇಕಣಾಜೆ, ಅಶ್ವಿಜ ಶ್ರೀಧರ್, ಅನಿತಾ ಶೆಣೈ, ವಿದ್ಯಾಶ್ರೀ ಅಡೂರ್ ಹಾಗೂ ಪರಿಮಳ ಮಹೇಶ್ ರಾವ್ ಭಾಗವಹಿಸಿದರು. ಹಾಗೆಯೇ ಗಾನಸುಧೆಯಲ್ಲಿ ಪ್ರಸನ್ನಾ. ಸಿ. ಎಸ್. ಭಟ್ ಕಾಕುಂಜೆ, ಮಾಲತಿ ಎಸ್. ಎನ್. ಭಟ್ ಕಾಕುಂಜೆ, ಶ್ಯಾಮಲಾ ಸಂಪತ್ತಿಲ, ಯಶೋದಾ ಭಟ್ ಉಪ್ಪಂಗಳ, ಸುಜಾತಾ ಜಿ. ಭಟ್ ಭಾಗವಹಿಸಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಜೊತೆ ಕಾರ್ಯದರ್ಶಿ ರಾಜೇಶ್ವರಿ ಎಚ್. ಬಜ್ಪೆ ನಿರ್ವಹಿಸಿದರು.




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top