ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಗೀತಾ ಜಯಂತಿ ಆಚರಣೆ
ಪುತ್ತೂರು: ಭಗವದ್ಗೀತೆ ನಮ್ಮ ದೇಶದ ಆತ್ಮ ಹಾಗೂ ಹಲವಾರು ಮಹಾ ವ್ಯಕ್ತಿಗಳಿಗೆ, ಸಂತರಿಗೆ ಭಗವದ್ಗೀತೆ ತಮ್ಮ ಜೀವನವನ್ನು ಅತ್ಯಂತ ಎತ್ತರಕ್ಕೆ ಏರಿಸಲು ಸ್ಪೂರ್ತಿಯಾಗಿದೆ. ಬದುಕಿನ ಎಲ್ಲಾ ಸಮಸ್ಯೆ, ಜಂಜಾಟಗಳಿಗೂ ಪರಿಹಾರ ರೂಪಿಯಾಗಿ ಈ ಪುಣ್ಯಗ್ರಂಥ ನಮ್ಮ ಮುಂದಿದೆ ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಭಗವಾನ್ ಶ್ರೀಕೃಷ್ಣನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶ ಮಾಡಿದ ದಿನದ ಔಚಿತ್ಯವನ್ನು ತಿಳಿಸುವ ಸಲುವಾಗಿ ಆಯೋಜಿಸಲಾದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ಹಲವಾರು ವಿದೇಶಿ ವಿಜ್ಞಾನಿಗಳಿಗೂ ಈ ಗೀತೆ ಪ್ರೇರಣೆ ನೀಡಿದೆ. ಗೀತೆಯಲ್ಲಿ ಜೀವನದ ಸಮಸ್ಯೆಗಳಿಗೆ ಪರಿಹಾರವಿದೆ, ವಿಜ್ಞಾನವಿದೆ, ಬದುಕಿನ ಲೆಕ್ಕಾಚಾರಗಳಿವೆ ಎಂದರಲ್ಲದೆ ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವ ಹಾಗೆ ಋಷಿಯಜ್ಞ, ದೇವಯಜ್ಞ, ಪಿತೃಯಜ್ಞ, ಮನುಷ್ಯ ಯಜ್ಞ, ಭೂತ ಯಜ್ಞಗಳನ್ನು ನಿರಂತರವಾಗಿ ಮಾಡುವುದರ ಮೂಲಕ ಒಳ್ಳೆಯ ವ್ಯಕ್ತಿಗಳಾಗಬೇಕು. ಹಾಗೆಯೇ ಶ್ರೀ ಕೃಷ್ಣನು ನಮಗೆ ತೋರುವ ಬೆಳಕಿನಲ್ಲಿ ನಾವು ದೇಶ ಸೇವೆ ಹಾಗೂ ಧರ್ಮಸೇವೆಗಳನ್ನು ಮಾಡಿ ಅರ್ಜುನರಾಗಬೇಕು ಎಂದು ಕರೆನೀಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಸಂಪೂರ್ಣವಾಗಿ ಪಠಿಸಿ ಗೀತಾ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿಸಿದರು. ವಿದ್ಯಾರ್ಥಿನಿ ಕು.ಕುವಿರಾ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ