ಭಗವದ್ಗೀತೆ ದಿವ್ಯ ಔಷಧ: ಡಾ. ಗುರುರಾಜ ಪೋಶೆಟ್ಟಿಹಳ್ಳಿ

Upayuktha
0

ಟಿಟಿಡಿ ಹಿಂದೂ ಧರ್ಮ ಪ್ರಚಾರ ಪರಿಷತ್ತಿನಿಂದ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಆಯೋಜನೆ 




 ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದ ಹಿಂದೂ ಧರ್ಮ ಪ್ರಚಾರ ಪರಿಷತ್  ಬೆಂಗಳೂರಿನ  ವೈಯಾಲಿಕಾವಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗೀತಾ ಜಯಂತಿ ಅಂಗವಾಗಿ ರಾಜ್ಯಮಟ್ಟದ  ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.


150ಕ್ಕೂ ಅಧಿಕ ಶಾಲಾ ಮಕ್ಕಳು ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. 18+ ವಯೋಮಾನದವರಿಗೆ  ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಯಾವ ಒಂದು ಶ್ಲೋಕವನ್ನು ಕೇಳಿದರು ತಪ್ಪಿಲ್ಲದೆ ಸ್ಪಷ್ಟವಾಗಿ ಹೇಳಿದ ಅನೇಕ ಸ್ಪರ್ಧಿಗಳನ್ನು ಕಂಡು ಸಂತಸವಾಯಿತು ಎಂದು ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಸಂಸ್ಕೃತಿ ಚಿಂತಕ,ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು. 


ಭಗವದ್ಗೀತೆಯ ಪಠಣ ಪಾರಾಯಣದಿಂದ ಆಗುವ ಪ್ರಯೋಜನಗಳನ್ನು ಹಂಚಿಕೊಂಡ ಸ್ಪರ್ಧಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಕಾರಾತ್ಮಕತೆ ಆವರಿಸಿದೆ , ಮಾನಸಿಕ ದೈಹಿಕ ಸ್ವಾಸ್ತ್ಯದ ಮೇಲೆ ಬಹು ಪರಿಣಾಮ ಬೀರಿದೆ ಎಂದು ತಿಳಿಸಿದರು.


ಬೆಂಗಳೂರು ಟಿಟಿಡಿ ಹಿಂದೂ ಧರ್ಮಪ್ರಚಾರ ಪರಿಷತ್ತಿನ ಸ್ಥಾನಿಕ ಅಧಿಕಾರಿ ಡಾ. ಪಿ.ಭುಜಂಗ ರಾವ್, ತೀರ್ಪುಗಾರರಾದ ಲಕ್ಷ್ಮಿ ಸತೀಶ್, ದಿನೇಶ್, ಲಕ್ಷ್ಮಿ ನಾಗೇಶ್, ತಾರಾದೇವಿ, ಕಲಾವತಿ, ಉಮಾ ಜಿ ರಾಜುಲು, ಕಾಕೋಳು ನಾರಾಯಣ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.


 ಡಿ 11 ರಂದು ಗೀತಾ ಜಯಂತಿಯ ಅಂಗವಾಗಿ ದೇವಾಲಯದಲ್ಲಿ 18 ಅಧ್ಯಾಯಗಳ ಗೀತಾ ಪಾರಾಯಣ ನಡೆಯಲಿದೆ ಎಂದು ತಿಳಿಸಿರುತ್ತಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top