ಡಿ.9-12: ಭಜನ - ಪ್ರವಚನ - ಸಂಕೀರ್ತನ

Upayuktha
0

 



ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಗೀತಾ ಜಯಂತಿ ಪ್ರಯುಕ್ತ ಡಿಸೆಂಬರ್ 9 ರಿಂದ 12ರ ವರೆಗೆ ಪ್ರತಿದಿನ ಸಂಜೆ 6-00 ರಿಂದ 8-00ರ ವರೆಗೆ ಶ್ರೀರಾಮಪುರದ 4ನೇ ಅಡ್ಡರಸ್ತೆಯಲ್ಲಿರುವ ಗೀತಾ ಮಂದಿರದಲ್ಲಿ ವಿವಿಧ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :


ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6-00 ರಿಂದ 7-00) : ಡಿಸೆಂಬರ್ 9, ಸೋಮವಾರ - ಮಲ್ಲೇಶ್ವರದ ವಾಸವಿ ಗಾನಮಂಜರಿ ಸದಸ್ಯರಿಂದ ಭಜನೆ, ಡಿಸೆಂಬರ್ 10, ಮಂಗಳವಾರ - ರಾಜಾಜಿನಗರದ ಅಂಭ್ರಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಡಿಸೆಂಬರ್ 11, ಬುಧವಾರ - ಮಲ್ಲೇಶ್ವರದ ವಾಸವಿ ಕಲಾ ಶಾಲೆಯ ಸದಸ್ಯರಿಂದ ಭಜನೆ.


ಪ್ರವಚನ ಕಾರ್ಯಕ್ರಮ : ಡಿಸೆಂಬರ್ 9 ರಿಂದ 11ರ ವರೆಗೆ (ಪ್ರತಿದಿನ ಸಂಜೆ 7-00 ರಿಂದ 8-00). ವಿಷಯ : "ಗೀತಾ ಸಂದೇಶ". ಪ್ರವಚನಕಾರರು : ಮ||ಶಾ||ಸಂ|| ಡಾ|| ಭೀಮಸೇನ ಗುತ್ತಲ ಆಚಾರ್ಯ.


ಹರಿನಾಮ ಸಂಕೀರ್ತನೆ : ಡಿಸೆಂಬರ್ 12, ಗುರುವಾರ ಸಂಜೆ 6-30ಕ್ಕೆ : ಗಾಯನ : ಶ್ರೀ ಆನಂದ್ ದೇಶಪಾಂಡೆ ಮತ್ತು ಸಂಗಡಿಗರಿಂದ ಏರ್ಪಡಿಸಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ
.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top