ಬೆಂಗಳೂರು: ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ 'ಸ್ವರ್ಗ ನಾ ಕಂಡಂತೆ' ಕಾದಂಬರಿ ಕೃತಿ ಬಿಡುಗಡೆ ಕಾರ್ಯಕ್ರಮ ಡಿ. 28 ರಂದು ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿ ಶತಮಾನೋತ್ಸವ ಸಭಾಂಗಣದಲ್ಲಿ ಸಂಜೆ 4:00 ಗಂಟೆಗೆ ನಡೆಯಲಿದೆ.
ನಿಮ್ಹಾನ್ಸ್‌ನ ನಿವೃತ್ತ ಹಿರಿಯ ಪ್ರಾಧ್ಯಾಪಕರು ಹಾಗೂ ಖ್ಯಾತ ಮನೋವೈದ್ಯ ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಹೆಸರಾಂತ ಕ್ವಿಜ್ ಮಾಸ್ಟರ್, ಟಿವಿ ನಿರೂಪಕರಾದ ಡಾ. ನಾ. ಸೋಮೇಶ್ವರ ಭಾಗವಹಿಸಲಿದ್ದಾರೆ.
ಕವಿ, ಲೇಖಕ ಸತ್ಯಕಾಮ ಶರ್ಮಾ ಮತ್ತು ನವಜಾತ ಶಿಶು ತಜ್ಞರು ಮತ್ತು ಬಿಡುಗಡೆಯಾಗಲಿರುವ ಕಾದಂಬರಿ ಮೂಲ ಇಂಗ್ಲಿಷ್ ಲೇಖಕರಾದ ಡಾ. ರಂಜನ್ ಪೇಜಾವರ ಉಪಸ್ಥಿತರಿರುತ್ತಾರೆ.
ದುಬೈನಲ್ಲಿ ನೆಲೆಸಿರುವ ಉದ್ಯಮಿ ಹಾಗೂ ಸಂಘಟಕರಾದ ಸುಧಾಕರ ಪೇಜಾವರ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಎಂದು ಸ್ನೇಹ ಬುಕ್ ಹೌಸ್‌ನ ಪ್ರಕಾಶಕ ಕೆ.ಬಿ ಪರಶಿವಪ್ಪ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ